alex Certify ಉಗ್ರರು ಅಡಗಿದ್ದ ಮನೆಯನ್ನೇ ಉಡೀಸ್​ ಮಾಡಿದ ಭಾರತೀಯ ಸೇನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗ್ರರು ಅಡಗಿದ್ದ ಮನೆಯನ್ನೇ ಉಡೀಸ್​ ಮಾಡಿದ ಭಾರತೀಯ ಸೇನೆ…!

ಭಾರತೀಯ ಸೇನಾಧಿಕಾರಿಗಳು ಮ್ಯಾನ್​ ಪೋರ್ಟಬಲ್​​ ಆ್ಯಂಟಿ ಟ್ಯಾಂಕ್​​ ಗೈಡೆಡ್​​ ಕ್ಷಿಪಣಿ ಸಹಾಯದಿಂದ ಭಯೋತ್ಪಾದಕರು ಅಡಗಿ ಕೂತಿದ್ದ ಮನೆಯನ್ನು ಹೊತ್ತಿ ಉರಿಯುವಂತೆ ಮಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಮನೆಯಲ್ಲಿ ಎಷ್ಟು ಮಂದಿ ಭಯೋತ್ಪಾದಕರು ಅಡಗಿ ಕುಳಿತಿದ್ದರು ಹಾಗೂ ಈ ಘಟನೆಯು ಯಾವ ಸ್ಥಳದಲ್ಲಿ ನಡೆದಿದೆ ಅನ್ನೋದಕ್ಕೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ಶ್ರೀಶ ತ್ರಿಪಾಠಿ ಎಂಬವರು ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಪೆಟ್ರೋಲ್​ಗೆ ಸಬ್ಸಿಡಿ ನೀಡಿ ಯಾರೂ ಬೇಕಿದ್ದರೂ ಲೀಟರ್​​ಗೆ 10 ರೂಪಾಯಿ ಮಾಡಿ ನೀಡಬಹುದು. ಆದರೆ ಭಯೋತ್ಪಾದಕರ ಹುಟ್ಟಡಗಿಸುವ ಇಂತಹ ವಿಡಿಯೋಗಳನ್ನ ಯಾರಿಂದಾದರೂ ನೀಡಲು ಸಾಧ್ಯವಿದೆಯೇ..? ಇದೇ ನವ ಭಾರತ..! ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯ ಅಡಿಯಲ್ಲಿ ಯಾವ ಮನೆಯಲ್ಲಿ ಭಯೋತ್ಪಾದಕರು ಅಡಗಿದ್ದರೋ ಅದೇ ಮನೆಯನ್ನ ಮ್ಯಾನ್​ ಪೋರ್ಟಬಲ್​ ಆ್ಯಂಟಿ ಟ್ಯಾಂಕ್​ ಗೈಡೆಟ್​ ಮಿಸೈಲ್​ ಬಳಸಿ ಉಡೀಸ್​ ಮಾಡಲಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...