alex Certify ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗಲೇ ಆಟೋ ಚಾಲಕನಿಂದ ಆಘಾತಕಾರಿ ಕೃತ್ಯ; ಶಾಕಿಂಗ್ ಘಟನೆ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗಲೇ ಆಟೋ ಚಾಲಕನಿಂದ ಆಘಾತಕಾರಿ ಕೃತ್ಯ; ಶಾಕಿಂಗ್ ಘಟನೆ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ 6.45 ರ ಸುಮಾರಿಗೆ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಕಾಲೇಜಿಗೆ ತೆರಳುತ್ತಿದ್ದ 21 ವರ್ಷದ ವಿದ್ಯಾರ್ಥಿನಿಗೆ ಆಟೋ ಚಾಲಕನೊಬ್ಬ ಅಶ್ಲೀಲ ಪದಗಳಿಂದ ಚುಡಾಯಿಸಿದ್ದಲ್ಲದೆ ಆಕೆಯ ಕೈಹಿಡಿದೆಳೆದಿದ್ದು, ಈ ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ವಿದ್ಯಾರ್ಥಿನಿ ಕಾಲೇಜಿಗೆ ತೆರಳುತ್ತಿದ್ದಾಗ ಆಟೋ ಚಾಲಕ ಚುಡಾಯಿಸಿದ್ದಾನೆ. ಬಳಿಕ ಆಕೆಯ ಕೈ ಹಿಡಿದು ಎಳೆದಿದ್ದು, ವಿದ್ಯಾರ್ಥಿನಿ ಪ್ರತಿರೋಧ ತೋರಿದ್ದಾಳೆ. ಆಗ ಆತ ಅಲ್ಲಿಂದ ಆಟೋ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ.

ಆದರೆ ಈ ಧೈರ್ಯಶಾಲಿ ಯುವತಿ ಆತ ತಪ್ಪಿಸಿಕೊಳ್ಳದಂತೆ ಹಿಡಿದ ವೇಳೆ ಆಟೋ ಸಮೇತ ಆಕೆಯನ್ನು 500 ಮೀಟರ್ವರೆಗೆ ಎಳೆದುಕೊಂಡು ಹೋಗಿದ್ದಾನೆ. ವಿದ್ಯಾರ್ಥಿನಿ ಕೆಳಗೆ ಬಿದ್ದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಈಗ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದು, ತಂಡಗಳನ್ನು ರಚಿಸಿಕೊಂಡು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...