’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ.
ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ ಅಲಿ, ತನ್ನ 21ನೇ ವಯಸ್ಸಿನಲ್ಲಿ ದೆಹಲಿ ವಿವಿಗೆ ಪ್ರವೇಶ ಪಡೆಯುತ್ತಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.
ಮಂಚದ ಕೆಳಗಿದ್ದ ವಿಶ್ವದ ಅತಿದೊಡ್ಡ ಜೇಡ ನೋಡಿ ವ್ಯಕ್ತಿಗೆ ಶಾಕ್..!
“ಗಡಿಯಾರಗಳನ್ನು ರಿಪೇರಿ ಮಾಡುತ್ತಾ ಗಾಳಿಪಟ ಮಾರುತ್ತಿದ್ದರು ಅಬ್ಬು. ಚಿಕ್ಕವನಿದ್ದಾಗ ಶಾಲೆ ಮುಗಿದ ಬಳಿಕ ನಾನು ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ. 9ನೇ ತರಗತಿಗೆ ಬಂದ ವೇಳೆ ನಾನು ನನ್ನದೇ ಗಾಳಿಪಟದ ಅಂಗಡಿ ತೆರೆದೆ. ಆದರೆ ಅಬ್ಬು ಸಾವು ನಮ್ಮೆಲ್ಲರಿಗೂ ಶಾಕ್ ಕೊಟ್ಟಿತು,” ಎಂದಿದ್ದಾರೆ ಶಹಾಬ್.
ಹೆತ್ತವರಿಗೆ ಹಿರಿಯ ಮಗನಾದ ಶಹಾಬ್, ತಂದೆಯ ಅಗಲಿಕೆಯ ನಂತರ ಒಡಹುಟ್ಟಿದ ಮೂವರು ಹಾಗೂ ಅಮ್ಮನನ್ನು ನೋಡಿಕೊಳ್ಳುವ ಹೊಣೆ ತಮ್ಮ ಹೆಗಲಿಗೆ ಹೊತ್ತುಕೊಂಡರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕಾಲೇಜಿಗೆ ಹೋಗುತ್ತಿದ್ದ ಶಹಾಬ್, ಸಂಜೆ ವೇಳೆ ಗಾಳಿಪಟದ ಅಂಗಡಿ ನೋಡಿಕೊಳ್ಳುತ್ತಿದ್ದರು.
ಅನ್ನವನ್ನು ಇಷ್ಟಪಡುವವರಿಗೆ ಇಲ್ಲಿದೆ ‘ಖುಷಿ ಸುದ್ದಿ’
ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ರಂಗಭೂಮಿಗೆ ಪ್ರವೇಶಿಸಿದ ಶಹಾಬ್, ಇದೇ ವೇಳೆ ತಮ್ಮ ಕುಟುಂಬಕ್ಕೆ ನೆರವಾಗಲು ಪತ್ರಿಕೋದ್ಯಮಕ್ಕೆ ಕಾಲಿಟ್ಟರು.
ಈ ವೇಳೆ ತಮ್ಮ ತಾಯಿಯ ಕುರಿತು ಮಾತನಾಡಿದ ಶಹಾಬ್, ನಟನೆಯಲ್ಲಿ ವೃತ್ತಿ ಕಟ್ಟಿಕೊಳ್ಳಲು ಮುಂದಿನ ಮೂರು ವರ್ಷಗಳವರೆಗೂ ಪ್ರಯತ್ನಿಸಿ, ಆಗಲೂ ಏನೂ ಆಗದೇ ಇದ್ದರೆ, ಬೆಳಿಗ್ಗೆ 9ರಿಂದ ಸಂಜೆ 5ರವರೆಗಿನ ದೈನಂದಿನ ಕೆಲಸಕ್ಕೆ ಮರಳುವುದಾಗಿ ತಿಳಿಸಿದ್ದರು.
ಎರಡು ಪ್ರಯತ್ನಗಳ ಬಳಿಕ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಸ್ಕಾಲರ್‌ಶಿಪ್ ಪಡೆದ ಶಹಾಬ್, ಮುಂದಿನ ದಿನಗಳಲ್ಲಿ ತಮಗೆ ಸಿಕ್ಕ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಸಾಗಿದರು. ಇದೇ ವೇಳೆ ತನ್ನ ತಂದೆಯ ಚಿಕಿತ್ಸೆಗೆಂದು ಬಳೆ ಅಡವಿಟ್ಟಿದ್ದ ತಾಯಿಗೆ ಆಕೆಯ ಆಭರಣಗಳನ್ನು ಮರಳಿ ತಂದುಕೊಡುವಲ್ಲಿ ಸಫಲರಾದರು ಶಹಾಬ್.
IPL Final: ಕೆಕೆಆರ್ ಮಣಿಸಿದ ಚೆನ್ನೈ 4ನೇ ಬಾರಿಗೆ ಚಾಂಪಿಯನ್
ಸಹೋದರಿಯ ಮದುವೆ ಮಾಡಿ, ಸಹೋದರನಿಗೆ ಕೆಲಸ ಸಿಕ್ಕೊಡನೆಯೇ ಮುಂಬಯಿಗೆ ಆಗಮಿಸಿದ ಶಹಾಬ್, ʼದಿ ಫ್ಯಾಮಿಲಿ ಮ್ಯಾನ್ʼನ ಆಡಿಶನ್‌ನಲ್ಲಿ ಆಯ್ಕೆಯಾಗಿ, ಮನೋಜ್ ಬಜಪೇಯಿ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
ಸದ್ಯ ತನ್ನ ತಾಯಿಯೊಂದಿಗೆ ಪುನಶ್ಚೇತನದ ಕಾಲೋನಿಯೊಂದರಲ್ಲಿ ವಾಸಿಸುತ್ತಿರುವ ಶಹಾಬ್‌ಗೆ ಮನೆ ಖರೀದಿ ಮಾಡುವುದು ಮುಂದಿನ ಗುರಿಯಂತೆ.