ಅಮೆಜಾನ್ ಪ್ರೈಂನಲ್ಲಿ ಪ್ರದರ್ಶನ ಕಂಡ ಫ್ಯಾಮಿಲಿ ಮ್ಯಾನ್ 2ನೇ ವೆಬ್ ಸರಣಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಈ ವೆಬ್ ಸರಣಿಯಲ್ಲಿ ದೆಹಲಿ ಮೂಲದ ನಟ ಶಾಹಬ್ ಅಲಿ ಸಾಜಿದ್ ಎಂಬ ಪಾತ್ರವನ್ನ ನಿರ್ವಹಿಸಿದ್ರು. ಈ ವೆಬ್ ಸರಣಿ ಮೂಲಕ ಶಾಹಬ್ಗೆ ದಕ್ಷಿಣ ಭಾರತದ ಹೆಸರಾಂತ ನಟಿ ಸಮಂತಾ ಅಕ್ಕಿನೇನಿ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ದೊರಕಿದೆ.
ಸಮಂತಾ ಅಕ್ಕಿನೇನಿ ಈ ವೆಬ್ ಸೀರಿಸ್ನಲ್ಲಿ ರಾಜಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ಈ ಎರಡು ಪಾತ್ರದ ಬಗ್ಗೆ ಶಾಹಬ್ ಇಂಟರೆಸ್ಟಿಂಗ್ ಮಾಹಿತಿಯೊಂದನ್ನ ಶೇರ್ ಮಾಡಿದ್ದಾರೆ. ಈ ವೆಬ್ ಸಿರೀಸ್ನಲ್ಲಿ ಸಾಜಿದ್ ಹಾಗೂ ರಾಜಿ ನಡುವೆ ಪ್ರೇಮಾಂಕುರವಾದ ಕತೆ ಕೂಡ ಇದ್ದಿತ್ತು. ಆದರೆ ಫೈನಲ್ ಟಚ್ ನೀಡುವ ವೇಳೆ ಈ ಸನ್ನಿವೇಶಗಳನ್ನ ಡಿಲೀಟ್ ಮಾಡಲಾಯ್ತು ಎಂದಿದ್ದಾರೆ.
ವೆಬ್ ಸರಣಿಗಳಲ್ಲಿ ಈ ರೀತಿ ಆಗೋದು ಸರ್ವೇ ಸಾಮಾನ್ಯ. ಎಡಿಟಿಂಗ್ ವೇಳೆ ಈ ರೀತಿ ಅನೇಕ ಸನ್ನಿವೇಶಗಳು ಕಟ್ ಆಗುತ್ತವೆ. ಸಾಜಿದ್ ಹಾಗೂ ರಾಜಿ ನಡುವೆ ಪ್ರೇಮ ಇರುವ ಕೆಲ ಸನ್ನಿವೇಶಗಳನ್ನ ಚಿತ್ರೀಕರಿಸಲಾಗಿತ್ತು. ಆದರೆ ಆ ದೃಶ್ಯಗಳು ಬಳಿಕ ಅಷ್ಟು ಮಹತ್ವದಲ್ಲ ಎನಿಸಿರಬಹುದು. ಹೀಗಾಗಿ ಅವುಗಳನ್ನ ಕಟ್ ಮಾಡಿ ತೆಗೆಯಲಾಯಿತು. ಇದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಸಮಂತಾ ಜೊತೆಗಿನ ಶೂಟಿಂಗ್ ಅನುಭವವನ್ನೂ ಇದೇ ವೇಳೆ ಶೇರ್ ಮಾಡಿದ ನಟ ಶಾಹಬ್, ನನಗೆ ನಿರ್ದೇಶಕರಾದ ರಾಜ್ ಹಾಗೂ ಡಿಕೆ ಸಮಂತಾ ಜೊತೆ ನಟನೆ ಮಾಡಬೇಕು ಎಂದು ಹೇಳಿದಾಗ ನಾನು ತುಂಬಾನೇ ಉತ್ಸುಕನಾಗಿದ್ದೆ. ಅವರು ದಕ್ಷಿಣ ಭಾರತದ ಹೆಸರಾಂತ ನಟಿ. ನಾನು ಮೊದಲು ತುಂಬಾನೇ ಗಾಬರಿಗೊಳಗಾಗಿದ್ದೆ. ಆದರೆ ಅವರೊಂದಿಗೆ ಮಾತನಾಡಿದ ಬಳಿಕ ನನಗೆ ಆ ಭಯ ಹೋಯ್ತು. ಅವರಿಂದ ನಾನು ತುಂಬಾನೇ ಕಲಿತೆ ಎಂದು ಹೇಳಿದ್ದಾರೆ.