
ಎಂಟು ಸೆಕೆಂಡುಗಳ ವಿಡಿಯೋದಲ್ಲಿ, ಹಸುಗಳು ಮತ್ತು ಗೂಳಿಗಳು ತಮ್ಮ ಕೊಂಬಿನಿಂದ ಹೆಬ್ಬಾತುವನ್ನು ತಿವಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ, ಹೆಬ್ಬಾತು ಮಾತ್ರ ಈ ದೊಡ್ಡ ಗಾತ್ರದ ಜೀವಿಗಳಿಗೆ ಕಿಂಚಿತ್ತೂ ಹೆದರಿದಂತೆ ಕಂಡು ಬಂದಿಲ್ಲ. ಓರ್ವ ಕುಸ್ತಿ ಪಟುವಿನಂತೆ, ತೊಡೆ ತಟ್ಟಿ ನಿಂತಿರುವಂತೆ ಹೆಬ್ಬಾತು ಮುನ್ನುಗುತ್ತಿದೆ. ಹಸುಗಳು ಈ ಪುಟ್ಟ ಹಕ್ಕಿಯಿಂದ ಕೆಲವೇ ಇಂಚುಗಳಷ್ಟು ಮಾತ್ರ ದೂರದಲ್ಲಿದೆ. ಆದರೂ, ಹೆಬ್ಬಾತು ಮಾತ್ರ ಬೃಹತ್ ಗಾತ್ರ ಜೀವಿಗಳಿಗೆ ಕ್ಯಾರೆ ಅಂದಿಲ್ಲ. ಹಸುಗಳು ಆಕ್ರಮಣಕಾರಿಯಾಗಿ ವರ್ತಿಸಿದರೂ ಕೂಡ ಪುಟ್ಟ ಹಕ್ಕಿ ಮೇಲೆ ದಾಳಿ ಮಾಡಿಲ್ಲ.
ಟ್ವಿಟ್ಟರ್‌ನಲ್ಲಿ ಸ್ಪೂರ್ತಿದಾಯಕ ವಿಷಯವನ್ನು ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ, ಜೋಶ್ ಹೇಗಿದೆ, ಹೈ ಸರ್….. ಎಂಬಂತಹ ಶೀರ್ಷಿಕೆಯನ್ನು ನೀಡಿದ್ದಾರೆ. ನೀವು ಎಷ್ಟೇ ಚಿಕ್ಕವರಾದರೂ ಕೂಡ, ಆತ್ಮವಿಶ್ವಾಸ, ಧೈರ್ಯವಿದ್ದಲ್ಲಿ ತಮ್ಮನ್ನೇನೂ ಮಾಡಲು ಆಗುವುದಿಲ್ಲ ಎಂಬುದಕ್ಕೆ ಈ ಪುಟ್ಟ ಹಕ್ಕಿಯಿಂದ ಕಲಿಯಬಹುದು.