alex Certify ವ್ಯಕ್ತಿಗೆ ಕರೆ ಮಾಡಿ ನಿಮ್ಮ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಗೆ ಕರೆ ಮಾಡಿ ನಿಮ್ಮ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದ ಸಿಬ್ಬಂದಿ

ಬದುಕಿದ್ದ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳು ಹೇಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ.
ಥಾಣೆ ಮುನ್ಸಿಪಾಲ್​ ಕಾರ್ಪೋರೇಷನ್​ ಅವರು ಕರೆ ಮಾಡಿ ನಿಮ್ಮ ಮರಣ ಪ್ರಮಾಣ ಪತ್ರ ಕಚೇರಿಗೆ ಬಂದಿದೆ ಎಂದು ಹೇಳಿದ್ರು ಅಂತಾ ಚಂದ್ರಶೇಖರ್​ ದೇಸಾಯಿ ಆರೋಪ ಮಾಡಿದ್ದಾರೆ.

ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ ಉಪ ಕಮಿಷನರ್​ ಸಂದೀಪ್​ ಮಾಲ್ವಿ ಇದೊಂದು ತಾಂತ್ರಿಕ ದೋಷವಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಲಿಸ್ಟ್​ನ್ನು ತಯಾರು ಮಾಡಿದ್ದು ನಾವಲ್ಲ. ನಮಗೆ ಈ ಲಿಸ್ಟ್​ ಪುಣೆ ಕಚೇರಿಯಿಂದ ಬಂದಿತ್ತು. ತಾಂತ್ರಿಕ ದೋಷದಿಂದಾಗಿ ಈ ವ್ಯಕ್ತಿಯ ಹೆಸರೂ ಸಹ ಮೃತರ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ಅವರು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...