alex Certify BIG NEWS: ಪಠ್ಯ ಪರಿಷ್ಕರಣೆಗೆ ಮತ್ತೊಂದು ಸಮಿತಿ, ರೋಹಿತ್ ಚಕ್ರತೀರ್ಥ ತಪ್ಪು ತಿದ್ದಲು ಮುಂದಾದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಠ್ಯ ಪರಿಷ್ಕರಣೆಗೆ ಮತ್ತೊಂದು ಸಮಿತಿ, ರೋಹಿತ್ ಚಕ್ರತೀರ್ಥ ತಪ್ಪು ತಿದ್ದಲು ಮುಂದಾದ ಸರ್ಕಾರ

ಬೆಂಗಳೂರು: ತಣ್ಣಗಾಗಿದ್ದ ಪಠ್ಯ ಪರಿಷ್ಕರಣೆಯ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದೆ. ರೋಹಿತ್ ಚಕ್ರತೀರ್ಥ ಸಮಿತಿಯ ತಪ್ಪು ತಿದ್ದಲು ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಪಠ್ಯ ಪರಿಷ್ಕರಣೆಗೆ ಮತ್ತೊಂದು ಸಮಿತಿ ರಚಿಸಲಾಗಿದೆ. ಮತ್ತೆ ಪಠ್ಯ ಎಡವಟ್ಟು ತಿದ್ದಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಮಿತಿಯಲ್ಲಿ ಕೂಡ ತಜ್ಞರು, ಚಿಂತಕರು, ಸಾಹಿತಿಗಳು ಇಲ್ಲ. ಶಿಕ್ಷಣ ಇಲಾಖೆ ಚಿಂತಕರು ಸಾಹಿತಿಗಳಿಗೆ ಮಣೆ ಹಾಕಿಲ್ಲ. ಡಯಟ್ ಪ್ರಾಂಶುಪಾಲರು, ನುರಿತ ಶಿಕ್ಷಕರ ನೇತೃತ್ವದಲ್ಲಿ ಪಠ್ಯ ತಿದ್ದಲು ಸಮಿತಿಯನ್ನು ರಚಿಸಲಾಗಿದೆ.ಈ ಸಮಿತಿ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯದ ತಪ್ಪುಗಳನ್ನು ತಿದ್ದಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...