ಬೆಂಗಳೂರು: ತಣ್ಣಗಾಗಿದ್ದ ಪಠ್ಯ ಪರಿಷ್ಕರಣೆಯ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದೆ. ರೋಹಿತ್ ಚಕ್ರತೀರ್ಥ ಸಮಿತಿಯ ತಪ್ಪು ತಿದ್ದಲು ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಪಠ್ಯ ಪರಿಷ್ಕರಣೆಗೆ ಮತ್ತೊಂದು ಸಮಿತಿ ರಚಿಸಲಾಗಿದೆ. ಮತ್ತೆ ಪಠ್ಯ ಎಡವಟ್ಟು ತಿದ್ದಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಮಿತಿಯಲ್ಲಿ ಕೂಡ ತಜ್ಞರು, ಚಿಂತಕರು, ಸಾಹಿತಿಗಳು ಇಲ್ಲ. ಶಿಕ್ಷಣ ಇಲಾಖೆ ಚಿಂತಕರು ಸಾಹಿತಿಗಳಿಗೆ ಮಣೆ ಹಾಕಿಲ್ಲ. ಡಯಟ್ ಪ್ರಾಂಶುಪಾಲರು, ನುರಿತ ಶಿಕ್ಷಕರ ನೇತೃತ್ವದಲ್ಲಿ ಪಠ್ಯ ತಿದ್ದಲು ಸಮಿತಿಯನ್ನು ರಚಿಸಲಾಗಿದೆ.ಈ ಸಮಿತಿ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯದ ತಪ್ಪುಗಳನ್ನು ತಿದ್ದಲಿದೆ ಎಂದು ಹೇಳಲಾಗಿದೆ.