ನೀವು ಹಾಲಿವುಡ್ ಸಿನೆಮಾಗಳ ಅಭಿಮಾನಿಯಾಗಿದ್ದರೆ ಲೇಕ್ ಪ್ಲೇಸಿಡ್ ವರ್ಸಸ್ ಅನಕೊಂಡಾ ಹಾಗೂ ಅನಕೊಂಡಾ ಫ್ರಾಂಚೈಸಿ ಮೂವಿಗಳಲ್ಲಿ ಜಗತ್ತಿನ ಅತಿ ದೊಡ್ಡ ಹಾವು ಎಷ್ಟು ಗಾತ್ರವಿರುತ್ತದೆ ಎಂದು ಕಂಡಿರಬಹುದು.
ಆದರೆ ಅನಕೊಂಡಾಗಳಿಗಿಂತ ದೊಡ್ಡ ಗಾತ್ರದ ಹೆಬ್ಬಾವುಗಳು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ ? ಗಾತ್ರ ಹಾಗೂ ಇನ್ನಿತರ ಸ್ವಭಾವಗಳಿಂದ ಅನಕೊಂಡಾ ಅತ್ಯಂತ ಡೆಡ್ಲಿ ಎಂದು ಪರಿಗಣಿಸಲ್ಪಟ್ಟಿದೆ.
ಆದರೆ ಮಲಯೋಪೈಥಾನ್ ಹೆಸರಿನ ಈ ಹೆಬ್ಬಾವಿನ ಗಾತ್ರ ಹಾಗೂ ಉದ್ದದ ಅಂದಾಜನ್ನು ಕೊಡಮಾಡುವ ಈ ವಿಡಿಯೋ ನೆಟ್ಟಿಗರನ್ನು ತಲ್ಲಣಗೊಳಿಸಿದೆ.
“ಈ ಹೆಬ್ಬಾವು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತಿದ್ದು, ಜಗತ್ತಿನ ಅತಿ ಉದ್ದದ ಹಾವಾಗಿದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.