ಆಸ್ಟ್ರೇಲಿಯಾದ ಟೆನ್ನಿಸ್ ಆಟಗಾರ ಅಲೆಕ್ಸ್ ಡಿ ಮಿನೌರ್ಗೆ ಕೊರೊನಾ ಸೋಂಕು ತಗುಲಿದ್ದು ಟೋಕಿಯೋ ಒಲಿಂಪಿಕ್ಸ್ನಿಂದ ಹೊರನಡೆದಿದ್ದಾರೆ. ಆಸ್ಟ್ರೇಲಿಯಾದ ಒಲಿಂಪಿಕ್ ತಂಡದ ಮುಖ್ಯಸ್ಥ ಇಯಾನ್ ಚೆಸ್ಟರ್ಮನ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಅಲೆಕ್ಸ್ ಬಾಲ್ಯದಿಂದಲೇ ಒಲಿಂಪಿಕ್ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಪ್ರತಿನಿಧಿಸುವ ಕನಸನ್ನ ಹೊಂದಿದಂತವರು. ಆದರೆ ಇದೀಗ ಕೊರೊನಾ ಸೋಂಕಿನಿಂದಾಗಿ ಪಂದ್ಯ ಆರಂಭಕ್ಕೂ ಮುನ್ನವೇ ಅಲೆಕ್ಸ್ ಹೊರನಡೆಯುತ್ತಿರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಚೆಸ್ಟರ್ಮನ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಖ್ಯಾತ ಟೆನ್ನಿಸ್ ಆಟಗಾರರ ಪೈಕಿ ಒಬ್ಬರಾದ ಅಲೆಕ್ಸ್ ವಿಶ್ವ ಶ್ರೇಯಾಂಕಿತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಲೆಕ್ಸ್ ಸಿಂಗಲ್ಸ್ ಹಾಗೂ ಡಬಲ್ಸ್ ಗಳೆರಡರಲ್ಲಿಯೂ ಆಸ್ಟ್ರೇಲಿಯಾವನ್ನ ಪ್ರತಿನಿಧಿಸುವವರಿದ್ದರು. ಡಬಲ್ಸ್ನಲ್ಲಿ ಅಲೆಕ್ಸ್ ಸಹ ಆಟಗಾರರಾಗಿದ್ದ ಜೋನ್ ಪಿಯರ್ಸ್ ಒಲಿಂಪಿಕ್ನಲ್ಲಿ ಮುಂದುವರಿಯುತ್ತಾರಾ ಇಲ್ಲವಾ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.