alex Certify ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದರ್ಶನಕ್ಕೆ ಆಕ್ಷೇಪ: ಫಲಕ ತೆರವಿಗೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದರ್ಶನಕ್ಕೆ ಆಕ್ಷೇಪ: ಫಲಕ ತೆರವಿಗೆ ಮನವಿ

ದೇವಸ್ಥಾನಗಳಲ್ಲಿ ಅಂಗಿ, ಬನಿಯನ್ ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಂಗಿ, ಬನಿಯನ್ ತೆಗೆದು ದರ್ಶನ ಪಡೆಯುವ ಪದ್ಧತಿ ತಪ್ಪು ಎಂದು ಹೇಳಲಾಗಿದೆ. ಈ ಕುರಿತಾಗಿ ದೇವಾಲಯಗಳಲ್ಲಿ ಹಾಕಿದ ಫಲಕ ತೆರವಿಗೆ ಮನವಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವಿರುದ್ಧ ದೂರು ನೀಡಲಾಗಿದೆ. ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಹೇಳಲಾಗಿದೆ. ಇಂತಹ ಆಚರಣೆಯ ಮೂಲಕ ಭಕ್ತರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಚರ್ಮರೋಗವಿದ್ದವರು ಅಂಗಿ ಕಳಚಿದರೆ ಚರ್ಮರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇರುತ್ತದೆ. ದಿವ್ಯಾಂಗರು ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಇದು ಸಂವಿಧಾನದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

ತಕ್ಷಣ ದೇವಸ್ಥಾನದಲ್ಲಿ ಅಳವಡಿಸಲಾದ ಬಟ್ಟೆ ತೆಗೆಯಬೇಕು ಎನ್ನುವ ಸೂಚನಾ ಫಲಕ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...