ಕೋವಿಡ್-19 ಲಾಕ್ಡೌನ್ನಿಂದ ನಿಧಾನವಾಗಿ ಹೊರಬರುತ್ತಿರುವ ಚಿತ್ರೋದ್ಯಮಕ್ಕೆ ಹೊಸ ನಿರ್ಬಂಧಗಳ ನಡುವೆ ಚಿತ್ರಗಳ ಬಿಡುಗಡೆ ಸಂಬಂಧ ಇದ್ದ ಆತಂಕಗಳನ್ನು ತೆಲುಗು ಸಿನಿಮಾ ’ಉಪ್ಪೇನಾ’ ದೂರ ಮಾಡಿದೆ.
ಬುಚ್ಚಿ ಬಾಬು ಸಾನಾ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪಂಜ ವೈಷ್ಣವಿ ತೇಜ್ ಹಾಗೂ ಕ್ರಿತಿ ಶೆಟ್ಟಿ ಮುಂಚೂಣಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲೇ ಈ ಚಿತ್ರವು ಇದುವರೆಗೂ 28 ಕೋಟಿ ರೂ.ಗಳನ್ನು ಬಾಚಿಕೊಂಡಿದೆ.
ಫಿದಾ ಹಾಗೂ ಗೀತ ಗೋವಿಂದಮ್ ಚಿತ್ರಗಳು ಈ ಹಿಂದೆ ಮಾಡಿದ್ದ ಕಲೆಕ್ಷನ್ ದಾಖಲೆಯನ್ನು ಮುರಿಯುವ ಆಶಯವನ್ನು ’ಉಪ್ಪೇನಾ’ ಚಿತ್ರತಂಡ ಇಟ್ಟುಕೊಂಡಿದೆ.
ತಮಿಳು ಹಾಗೂ ತೆಲುಗು ಚಿತ್ರರಂಗಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಅಬ್ಬರಿಸಲು ಸಾಧ್ಯವಾಗದೇ ಇದ್ದರೂ ಸಹ ತಮ್ಮ ಚಿತ್ರಗಳಿಗೆ ಪ್ರೇಕ್ಷಕರ ಕೊರತೆಯನ್ನಂತೂ ಎದುರಿಸುತ್ತಿಲ್ಲ ಎಂದು ಬಾಕ್ಸ್ ಆಫೀಸ್ ಇಂಡಿಯಾ ತಿಳಿಸಿದೆ.