alex Certify ವರನಿಗೆ ಪೆಟ್ರೋಲ್​ ಗಿಫ್ಟ್​ ನೀಡಿದ ಕಾಂಗ್ರೆಸ್​ ನಾಯಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನಿಗೆ ಪೆಟ್ರೋಲ್​ ಗಿಫ್ಟ್​ ನೀಡಿದ ಕಾಂಗ್ರೆಸ್​ ನಾಯಕ….!

ತೆಲಂಗಾಣದ ಸ್ಥಳೀಯ ಕಾಂಗ್ರೆಸ್​ ನಾಯಕ ಮೋಹಾಸಿನ್​​​ ಎಂಬವರು ತಮ್ಮ ಸ್ನೇಹಿತ ಸೈಯದ್​ ರಯಾದ್​ ವಿವಾಹ ಮಹೋತ್ಸವದ ದಿನದಂದು 5 ಲೀಟರ್​ ಪೆಟ್ರೋಲ್​ನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ವಿಶೇಷ ಅಂದರೆ ವರ ಸೈಯದ್​ ರಯಾದ್​ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಇವರ ವಿವಾಹವು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಕೋಹಿರ್​ ಎಂಬಲ್ಲಿ ನಡೆದಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ರಯಾದ್​ ಸ್ನೇಹಿತರ ಸಮ್ಮುಖದಲ್ಲಿ ತಮಗೆ ಬಂದಿರುವ ಗಿಫ್ಟ್​ ಪ್ಯಾಕ್​ ತೆರೆದು ಅದರೊಳಗೆ ಇರುವ ಪೆಟ್ರೋಲ್​ ಕ್ಯಾನ್​ ಇರೋದನ್ನ ನೋಡಿ ನಕ್ಕಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್​ ನಾಯಕ ಮೋಹಾಸಿನ್, ಕೇಂದ್ರ ಸರ್ಕಾರಕ್ಕೆ ಈ ಮೂಲಕ ಏರುತ್ತಿರುವ ಪೆಟ್ರೋಲ್​ ಬೆಲೆ ಇಳಿಸುವ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...