ತೆಲಂಗಾಣದ ಸ್ಥಳೀಯ ಕಾಂಗ್ರೆಸ್ ನಾಯಕ ಮೋಹಾಸಿನ್ ಎಂಬವರು ತಮ್ಮ ಸ್ನೇಹಿತ ಸೈಯದ್ ರಯಾದ್ ವಿವಾಹ ಮಹೋತ್ಸವದ ದಿನದಂದು 5 ಲೀಟರ್ ಪೆಟ್ರೋಲ್ನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ವಿಶೇಷ ಅಂದರೆ ವರ ಸೈಯದ್ ರಯಾದ್ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಇವರ ವಿವಾಹವು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಕೋಹಿರ್ ಎಂಬಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಯಾದ್ ಸ್ನೇಹಿತರ ಸಮ್ಮುಖದಲ್ಲಿ ತಮಗೆ ಬಂದಿರುವ ಗಿಫ್ಟ್ ಪ್ಯಾಕ್ ತೆರೆದು ಅದರೊಳಗೆ ಇರುವ ಪೆಟ್ರೋಲ್ ಕ್ಯಾನ್ ಇರೋದನ್ನ ನೋಡಿ ನಕ್ಕಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಮೋಹಾಸಿನ್, ಕೇಂದ್ರ ಸರ್ಕಾರಕ್ಕೆ ಈ ಮೂಲಕ ಏರುತ್ತಿರುವ ಪೆಟ್ರೋಲ್ ಬೆಲೆ ಇಳಿಸುವ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.