ಪೋರ್ಚುಗಲ್‌ನ ಟೀನೇಜರ್ ಒಬ್ಬರಿಗೆ ಬಾಟಲಿಯೊಂದರ ಮೂಲಕ ಸಂದೇಶವೊಂದು ಸಿಕ್ಕಿದೆ. ಈ ಸಂದೇಶವನ್ನು ವರ್ಮಾಂಟ್‌ನ ಟೀನೇಜರ್ ಒಬ್ಬಾಕೆ ಕಳುಹಿಸಿದ್ದು, 3,860 ಕಿಮೀನಷ್ಟು ದೂರ ಕ್ರಮಿಸಿ ಅಟ್ಲಾಂಟಿಕ್ ಸಾಗರವನ್ನು ಹಾದು ಪೋರ್ಚುಗಲ್‌ನ ಹುಡುಗಿಯನ್ನು ತಲುಪಿದೆ.
ಈ ಸಂದೇಶವು ಅಮೆರಿಕದ ನ್ಯೂ ಇಂಗ್ಲೆಂಡ್‌ನಿಂದ ತೇಲಿಕೊಂಡು ಬಂದಿದೆ. ಕ್ರಿಸ್ಚಿಯನ್ ಸ್ಯಾಂಟೋಸ್ ಎಂಬ 17 ವರ್ಷದ ಟೀನೇಜರ್‌ಗೆ ನೀರಿನಲ್ಲಿ ಸಿಗುವ ವಸ್ತುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದು, ಆಕೆಗೆ ಈ ಪ್ಲಾಸ್ಟಿಕ್ ಬಾಟಲಿ ಸಿಕ್ಕಿದೆ.
ನಿಮ್ಮ ಗುಣ ನಿರ್ಧರಿಸುತ್ತೆ ದೇಹದಲ್ಲಿನ ಬ್ಲಡ್ ಗ್ರೂಪ್…! ಇಲ್ಲಿದೆ ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ
ಸಾವೋ ಓರ್ಗೆ ದ್ವೀಪದ ಅಜ಼ೋರ್‌ನ ಸಮುದ್ರ ತೀರದಲ್ಲಿ ತೇಲುತ್ತಿದ್ದ ಶಕ್ತಿವರ್ಧಕ ಪೇಯವೊಂದರ ಬಾಟಲಿಯಲ್ಲಿದ್ದ ನೋಟ್‌ಕಾರ್ಡ್‌ನಲ್ಲಿ, “ಇದು ಥ್ಯಾಂಕ್ಸ್ ಗಿವಿಂಗ್. ನನಗೆ ಈಗ 13 ವರ್ಷ ಹಾಗೂ ನಾನು ರ‍್ಹೋಡ್ ದ್ವೀಪದಲ್ಲಿರುವ ನನ್ನ ಕುಟುಂಬವನ್ನು ಭೇಟಿಯಾಗಲು ಹೊರಟಿರುವೆ. ನಾನು ವರ್ಮಾಂಟ್‌ನವಳು” ಎಂದು ಎರಡು ವರ್ಷದ ಹಿಂದೆ ಬರೆದಿದೆ.
ಬಳಸಿದ ಒಳ ಉಡುಪು ಮಾರಾಟ ಮಾಡಿ ಈಕೆ ಗಳಿಸ್ತಾಳೆ ಲಕ್ಷಾಂತರ ರೂ…!
ಈ ಕಾರ್ಡ್‌ನ ಫೋಟೋವನ್ನು ಸ್ಯಾಂಟೋಸ್‌ನ ತಾಯಿ ಮೋಲ್ಲಿ ಸ್ಯಾಂಟೋಸ್ ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.facebook.com/molly.santos.1000/posts/330384358484105