ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ ಯುಕೆ ಮೂಲದ ಯುವತಿ ಇದೀಗ ಜಾಂಬಿಯಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಳೆ.
ಹೌದು, 10 ಅಡಿ ಉದ್ದದ ಮೊಸಳೆ ಬಾಯಿಗೆ ಸಿಲುಕಿ ರಕ್ಷಣೆಗೊಳಗಾದ ಯುವತಿಯ ರೋಚಕ ಕಥೆಯಿದು. ಯುಕೆ ಮೂಲದ ಅಮೆಲಿ ಓಸ್ಬೋರ್ನ್ ಸ್ಮಿತ್, ಜಾಂಬಿಯಾದಲ್ಲಿ ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ್ದಳು. ಈ ವೇಳೆ ನೈಲ್ ಮೊಸಳೆ ಅಮೆಲಿ ಮೇಲೆ ದಾಳಿ ಮಾಡಿದೆ.
ವಿಕ್ಟೋರಿಯಾ ಜಲಪಾತದ ಬಳಿ ಅಮೆಲಿ ತನ್ನ ಸ್ನೇಹಿತರ ಜೊತೆ ದೋಣಿಯಲ್ಲಿ ವಿಹಾರ ಮಾಡುತ್ತಿದ್ದಳು. ಈ ವೇಳೆ ದೋಣಿಯ ಬದಿಯಲ್ಲಿ ತನ್ನ ಕಾಲುಗಳನ್ನಿಟ್ಟು ಕೂತಿದ್ದ ಈಕೆಯ ಮೇಲೆ, ಅದೆಲ್ಲಿತ್ತೋ ಏನೋ ನೈಲ್ ಮೊಸಳೆ ದಾಳಿ ಮಾಡಿ ಅಮೆಲಿಯನ್ನು ಎಳೆದೊಯ್ದಿದೆ. ಕೂಡಲೇ ಈಕೆಯ ಸ್ನೇಹಿತರು ರಕ್ಷಣೆಗೆ ಧಾವಿಸಿದ್ದು, ಮೊಸಳೆಗೆ ಬಡಿದಿದ್ದಾರೆ. ನಂತರ ಶೀಘ್ರವೇ ಅಮೆಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಕಡಿಮೆಯಾಗ್ತಿರುವ 2000 ರೂ. ನೋಟುಗಳ ಬಗ್ಗೆ ಮುಖ್ಯ ಮಾಹಿತಿ
ಜಾಂಬಿಯಾದ ಆಸ್ಪತ್ರೆಯಲ್ಲಿ ಅಮೆಲಿಗೆ ಚಿಕಿತ್ಸೆ ನೀಡಲಾಯಿತು. ಆದರೆ, ವಿಚಿತ್ರ ಅಂದ್ರೆ ಮೊಸಳೆ ದಾಳಿಗೊಳಗಾಗಿದ್ದರಿಂದ ತನ್ನ ಕಾಲಿನಿಂದ ರಕ್ತ ಸುರಿಯುತ್ತಿದ್ದರೂ, ಅಮೆಲಿ ಮಾತ್ರ ಒಂದೇ ಒಂದು ಹನಿ ಕಣ್ಣೀರು ಸುರಿಸದೆ ಶಾಂತಚಿತ್ತಳಾಗಿ ಕೂತಿದ್ದಳಂತೆ.
ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮೆಲಿ ಚೇತರಿಸಿಕೊಂಡಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದನ್ನು ತನ್ನ ಫೇಸ್ಬುಕ್ ಪೇಜ್ ನಲ್ಲಿ ಆಸ್ಪತ್ರೆ ಹಂಚಿಕೊಂಡಿದೆ. ಅಮೆಲಿ ಚೇತರಿಸಿಕೊಳ್ಳುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಯುಕೆಯಲ್ಲಿರುವ ತನ್ನ ಕುಟುಂಬವನ್ನು ಮತ್ತೆ ಸೇರಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಮೊಸಳೆ ದಾಳಿಯ ನಂತರ ಅಮೆಲಿಗೆ ತನ್ನ ಕಾಲನ್ನು ಕಳೆದುಕೊಂಡುಬಿಟ್ಟೆ ಎಂದು ಅಂದುಕೊಂಡಿದ್ದಳಂತೆ. ಅದೃಷ್ಟವಶಾತ್ ವೈದ್ಯರು ಆಕೆಯ ಕಾಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, ಆಕೆ ಮೊದಲಿನಂತೆ ನಡೆಯಲು ಸಾಧ್ಯವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
https://www.youtube.com/watch?v=FtofQxm0HFk&feature=youtu.be