ದಾರಿಹೋಕರೊಬ್ಬರು ಸೆರೆ ಹಿಡಿದ ಶಾಕಿಂಗ್ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ 14 ಅಂತಸ್ತಿನ ಅಪಾರ್ಟ್ಮೆಂಟ್ನಿಂದ ಪೈಪ್ಗಳನ್ನು ಹಿಡಿದು ಕೆಳಗೆ ಜಾರಿಕೊಂಡು ಬರುತ್ತಿರುವ ಟೀನೇಜರ್ಗಳನ್ನು ನೋಡಬಹುದಾಗಿದೆ.
ಜಸ್ಟಿನ್ ಮಾಲ್ಪಿಕಾ ಎಂಬಾತ ಶೇರ್ ಮಾಡಿದ ಈ ವಿಡಿಯೋದಲ್ಲಿ, 18 ವರ್ಷದ ಹುಡುಗಿ ಮತ್ತು ಆಕೆಯ 13 ವರ್ಷದ ತಮ್ಮ ಹೊಗೆ ತುಂಬಿಕೊಂಡಿದ್ದ ಕಿಟಕಿಯಿಂದ ಆಚೆ ಬರಲು ಯತ್ನಿಸುತ್ತಿರುವುದನ್ನು ನೋಡಬಹುದು.
BREAKING: ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ
ನ್ಯೂಯಾರ್ಕ್ನ ಈಸ್ಟ್ ವಿಲೇಜ್ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ತುರ್ತು ಕರೆ ಸ್ವೀಕರಿಸಿದ ನಾಲ್ಕೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಅಷ್ಟರಲ್ಲಾಗಲೇ ಇವರಿಬ್ಬರೂ ಕಟ್ಟಡವನ್ನು ಇಳಿದುಬಿಟ್ಟಿದ್ದರು.
ಬರೀ 25-39 ಸೆಕೆಂಡ್ಗಳಲ್ಲಿ ಕಟ್ಟಡವನ್ನಿಳಿದ ಈ ಒಡಹುಟ್ಟಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಅವಘಡದಲ್ಲಿ ಸುಟ್ಟ ಗಾಯಗಳನ್ನು ಮಾಡಿಕೊಂಡ ಅವರ ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿಯಬೇಕಿದೆ.