alex Certify ವೋಡ್ಕಾ ಕುಡಿದ ಕಾರಣಕ್ಕೆ ಸ್ನೇಹಿತೆಯನ್ನೇ ಬಂಧಿಸಿಟ್ಟ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೋಡ್ಕಾ ಕುಡಿದ ಕಾರಣಕ್ಕೆ ಸ್ನೇಹಿತೆಯನ್ನೇ ಬಂಧಿಸಿಟ್ಟ ಭೂಪ…!

ತನ್ನ ದುಬಾರಿ ವೋಡ್ಕಾ ಕುಡಿದಳೆಂದು 18 ವರ್ಷದ ಯುವತಿಯೊಬ್ಬಳನ್ನು ಆಕೆಯ ಸ್ನೇಹಿತನೇ ಫ್ಲಾಟ್ ನಲ್ಲಿ ಬಂಧಿಯಾಗಿಟ್ಟ ವಿಚಿತ್ರ ಪ್ರಸಂಗ ಬ್ರಿಟನ್ ನಲ್ಲಿ ನಡೆದಿದೆ.

ಕ್ಲಾರಿಟಿ ಕೆನಡಿ ಎಂಬಾತ ತನ್ನ 18 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮರು ದಿನ ಬೆಳಗ್ಗೆ ಮದ್ಯದ ಅಮಲಿನ ಬಳಿಕ ಎಚ್ಚರಗೊಂಡು ತನ್ನ ಸ್ನೇಹಿತೆ ಲಾರಾ ಕ್ರೀಡನ್ 8 ಸಾವಿರ ರೂ. ಮೌಲ್ಯದ ವೋಡ್ಕಾ ಕುಡಿದಿದ್ದಾಳೆಂದು ಆರೋಪಿಸಿ ಸಿಟ್ಟಿಗೆದ್ದ.

ಇಲ್ಲಿ ನಡೆಯುತ್ತೆ ವಿಚಿತ್ರ ಆಚರಣೆ: ಸಗಣಿ ಉಂಡೆಯಲ್ಲಿ ಹೊಡೆದಾಡಿಕೊಳ್ತಾರೆ ಜನ….!

ಮೊದಲು ಅಷ್ಟು ಹಣ ತಕ್ಷಣವೇ ಪಾವತಿಸುವಂತೆ ಆತ ಪಟ್ಟು ಹಿಡಿದ. ಹಣ ಕೊಡಲು ಆಕೆ ನಿರಾಕರಿಸಿದಾಗ ಕೋಪದಲ್ಲಿ ಚಾಕುವಿನಿಂದ ಬೆದರಿಸಿದ್ದಾನೆ. ಇರಿದು ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾನೆ.

ಇದು ಇಷ್ಟಕ್ಕೆ ಮುಗಿಯಲಿಲ್ಲ. ಕೆನಡಿ ತನ್ನ ಸ್ನೇಹಿತೆಯನ್ನು ಫ್ಲಾಟ್ ನಿಂದ ಹೊರಗೆ ಬಿಡಲು ನಿರಾಕರಿಸಿ ಬಂಧಿಯಾಗಿಸಿಕೊಂಡ. ಜತೆಗೆ ಹಲವಾರು ಬಾರಿ ಖಾಲಿ ಬಾಟಲಿಯಿಂದ ಹೊಡೆದಿದ್ದಾನೆ. ಬಳಿಕ ಹಾಗೂ ಹೀಗೂ ಪಾರ್ಟಿಯಲ್ಲಿ ಉಳಿದ ಸ್ನೇಹಿತನ ಸಹಾಯದಿಂದ ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆಕೆಯ ದೂರಿನ ಅನುಸಾರ ಕೆನಡಿಗೆ 14 ತಿಂಗಳ ಬಂಧನ ಶಿಕ್ಷೆ ಮತ್ತು 60 ಗಂಟೆಗಳ ವೇತನವಿಲ್ಲದ ಕೆಲಸ ಮಾಡಲು ಶಿಕ್ಷೆ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...