alex Certify ಬೆಚ್ಚಿಬೀಳಿಸುವಂತಿದೆ ಈ ಸುದ್ದಿ..! ಟಿಕ್ ಟಾಕ್ ವೀಕ್ಷಣೆಯಿಂದ ಹೆಚ್ಚಾಗ್ತಿದೆ ಟಿಕ್ ಡಿಸಾರ್ಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ..! ಟಿಕ್ ಟಾಕ್ ವೀಕ್ಷಣೆಯಿಂದ ಹೆಚ್ಚಾಗ್ತಿದೆ ಟಿಕ್ ಡಿಸಾರ್ಡರ್

ಟಿಕ್ ಟಾಕ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಟಿಕ್ ಟಾಕ್ ನೋಡ್ತಿದ್ದಾರೆ. ಟಿಕ್ ಟಾಕ್ ವೀಕ್ಷಕರ ಸಂಖ್ಯೆಯಲ್ಲಿ ಹದಿಹರೆಯದವರು ಹೆಚ್ಚಾಗಿದ್ದಾರೆ. ಇದು ಅನೇಕ ಸಮಸ್ಯೆಗಳಿಗೂ ಕಾರಣವಾಗ್ತಿದೆ. ಹದಿಹರೆಯದವರಲ್ಲಿ ಹೆಚ್ಚಾಗ್ತಿರುವ ಸಂಕೋಚ, ಖಿನ್ನತೆಗೆ ಟಿಕ್ ಟಾಕ್ ಕಾರಣವಾಗ್ತಿದೆ ಎಂದು ಅನೇಕ ದೇಶಗಳ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕ್ಷಮೆ ಯಾಚನೆ ಬಳಿಕ ಸಿಬ್ಬಂದಿಯನ್ನು ಮರು ನೇಮಕ ಮಾಡಿದ ಜೊಮ್ಯಾಟೋ

ಕೊರೊನಾ ಸಾಂಕ್ರಾಮಿಕ ರೋಗದ ಆರಂಭದಿಂದಲೇ ಇದು ಉಲ್ಬಣಗೊಂಡಿದೆ. ಕೊರೊನಾ ಸಮಯದಲ್ಲಿ ಜನರು ಮನೆಯಿಂದ ಹೊರಗೆ ಹೋಗಿಲ್ಲ. ಮನರಂಜನೆಗೆ ಜನರು ಹೆಚ್ಚಾಗಿ ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣ ನೆಚ್ಚಿಕೊಂಡಿದ್ದರು. ಇದ್ರಿಂದಾಗಿ ಸಂಕೋಚ, ಖಿನ್ನತೆ ಹೆಚ್ಚಾಗಲು ಶುರುವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಟಿಕ್ ಟಾಕ್ ಹೆಚ್ಚು ವೀಕ್ಷಣೆ ಮಾಡುವ ಹುಡುಗಿಯರಿಗೆ ಟುರೆಟ್ಸ್ ಸಿಂಡ್ರೋಮ್ ಹೆಚ್ಚಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಟುರೆಟ್ಸ್ ಸಿಂಡ್ರೋಮ್ ಒಂದು ಆನುವಂಶಿಕ ನರ-ವ್ಯವಸ್ಥೆಯ ಅಸ್ವಸ್ಥತೆಯಾಗಿದೆ. ಇದ್ರಿಂದ ಬಳಲುವ ವ್ಯಕ್ತಿ, ಬಾಯಿ, ಮೂಗು, ಗಂಟಲಿನ ಸ್ನಾಯುಗಳ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ. ವ್ಯಕ್ತಿಯು ಇದ್ದಕ್ಕಿದ್ದಂತೆ ಚಲಿಸಲು ಅಥವಾ ಶಬ್ದ ಮಾಡಲು ಪ್ರಾರಂಭಿಸುತ್ತಾನೆ. ಇದನ್ನು ಟಿಕ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ಹಠಾತ್ ಬಿಕ್ಕಳಿಕೆ, ವಿಚಿತ್ರ ಧ್ವನಿ ಅಥವಾ ಬಾಯಿ ಅಲ್ಲಾಡಿಸುವ ಸಮಸ್ಯೆಗಳರುತ್ತವೆ. ವ್ಯಕ್ತಿಯು ಇದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಇದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಚಿಕ್ಕವನಾಗಿದ್ದಾಗ ಪ್ರಾರಂಭವಾಗುತ್ತದೆ. ದೊಡ್ಡವರಾದಂತೆ ಬೆಳೆಯುತ್ತ ಹೋಗುತ್ತದೆ.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಡೇಟಾವನ್ನು ಸಂಗ್ರಹಿಸಲಾಗಿಲ್ಲವಾದರೂ, ಕೆಲವು ವೈದ್ಯಕೀಯ ಕೇಂದ್ರಗಳು ಈ ಸಮಸ್ಯೆ ಹೊತ್ತು ಬರುತ್ತಿರುವವರ ಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಳವಾಗಿದೆ. ಕೊರೊನಾ ಮೊದಲು, ವೈದ್ಯಕೀಯ ಕೇಂದ್ರಗಳಿಗೆ ತಿಂಗಳಿಗೆ ಒಂದು ಅಥವಾ ಎರಡು ಪ್ರಕರಣಗಳು ಬರುತ್ತಿದ್ದವು. ಆದ್ರೀಗ ತಿಂಗಳಿಗೆ 10 ಅಥವಾ 20 ಮಂದಿ ಬರ್ತಿದ್ದಾರೆ ಎಂದು ವರದಿ ಮಾಡಲಾಗಿದೆ.

ಟೆಕ್ಸಾಸ್ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಮಕ್ಕಳ ನರವಿಜ್ಞಾನಿ ಮರಿಯಮ್ ಹಲ್ ಪ್ರಕಾರ, ಮಾನಸಿಕ ಅಸ್ವಸ್ಥತೆ, ಹಿಂದೆ ಹೆಚ್ಚಾಗಿ ಭೌಗೋಳಿಕ ಸ್ಥಳಗಳಿಗೆ ಸೀಮಿತವಾಗಿತ್ತು. ಆದರೆ ಸಾಮಾಜಿಕ ಮಾಧ್ಯಮವು ಅವುಗಳನ್ನು ಜಾಗತಿಕವಾಗಿ ಹರಡಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

8 ವರ್ಷದ ಹಿಂದೆ ಸಲ್ಲಿಸಿದ್ದ ಕೆಲಸದ ಅರ್ಜಿಗೆ ಈಗ ಬಂತು ಉತ್ತರ…..!

ಈ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಬಹುದು ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ಹೊರ ಬಂದಲ್ಲಿ ಇದು ಸಾಧ್ಯವಾಗುತ್ತದೆ. ಪೋಷಕರು ತಮ್ಮ ಮಕ್ಕಳು ಯಾವ ರೀತಿಯ ವಿಡಿಯೋಗಳನ್ನು ನೋಡುತ್ತಿದ್ದಾರೆ ಎಂಬ ಬಗ್ಗೆ ಗಮನ ಹರಿಸಬೇಕು. ಮಗುವಿನಲ್ಲಿ ಸಂಕೋಚ, ಖಿನ್ನತೆ ಕಾಣಿಸಿಕೊಂಡಲ್ಲಿ ತಜ್ಞರನ್ನು ಭೇಟಿಯಾಗಬೇಕೆಂದು ಅವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...