
ಪುರುಷರು ಈಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಮಯ, ಅವರಿಗಿಂತಲೂ ಬಲಿಷ್ಠವಾದ ಶಕ್ತಿಯೊಂದು ಹೊಳೆಯುತ್ತಿದೆ ಎಂದು ಶೀರ್ಷಿಕೆ ಕೊಟ್ಟು ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮೊಸಳೆಯೊಂದು ಸಕಲ ಶಕ್ತಿ ಪ್ರದರ್ಶನ ಮಾಡಿ ಬೇಲಿ ಮುರಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಂತರ ಸರಳುಗಳನ್ನು ಬಗ್ಗಿಸಲು ಕೊನೆಗೂ ಯಶಸ್ವಿಯಾಗಿದೆ.
ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ. ಈ ಬೇಲಿಯನ್ನು ಮುರಿಯಲು ಮೊಸಳೆ ಪ್ರಯತ್ನಿಸುತ್ತಿದ್ದುದಾದರೂ ಏಕೆ ಎಂಬ ಪ್ರಶ್ನೆಗೆ ಸದ್ಯ ಉತ್ತರ ಸಿಗಲಿಲ್ಲ.