ಐಓಎಸ್ನಲ್ಲಿ ಅಮೆಜಾನ್ ಅಪ್ಲಿಕೇಶನ್ ಬಳಕೆ ಮಾಡುವವರು ಇಂದು ಕೆಲ ಕಾಲ ತಾಂತ್ರಿಕ ದೋಷವನ್ನು ಅನುಭವಿಸಿದ್ದಾರೆ. ಅಮೆಜಾನ್ ಬಳಕೆದಾರರು ಈ ಬಗ್ಗೆ ಟ್ವಿಟರ್ನಲ್ಲಿ ಬೆಳಕು ಚೆಲ್ಲಿದ್ದಾರೆ. ಯಾವುದೇ ವಸ್ತುಗಳನ್ನು ಖರೀದಿ ಮಾಡುವಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.
ಅಂದ ಹಾಗೆ ಅಮೆಜಾನ್ ಆಂಡ್ರಾಯ್ಡ್ ಬಳಕೆದಾರರಿಗೆ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡೋದಾಗಿ ಅಮೆರಿಕದ ಇ ಕಾಮರ್ಸ್ ದೈತ್ಯ ಅಮೆಜಾನ್ ಹೇಳಿದೆ.
ಐಓಎಸ್ನಲ್ಲಿ ಅಮೆಜಾನ್ ಅಪ್ಲಿಕೇಶನ್ ಬಳಕೆ ಮಾಡುವವರಿಗೆ ಸಿಎಸ್11 ಎರರ್ ಕಾಣಿಸಿದೆ. ಮಂಗಳವಾರ ಮಧ್ಯಾಹ್ನದಿಂದ ಈ ದೋಷ ಕಾಣಿಸಿದೆ. ಭಾರತ ಮಾತ್ರವಲ್ಲದೇ ಯುರೋಪ್ ಹಾಗೂ ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಈ ಸಮಸ್ಯೆ ಕಾಣಿಸಿದೆ.