alex Certify Tech Tips​: ಹೊಸ ಲ್ಯಾಪ್​ ಟಾಪ್​ ಖರೀದಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Tech Tips​: ಹೊಸ ಲ್ಯಾಪ್​ ಟಾಪ್​ ಖರೀದಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಮನೆಯಲ್ಲೊಂದು ಲ್ಯಾಪ್​ಟಾಪ್​ ಇದ್ದರೆಷ್ಟು ಚೆಂದ ಎಂದು ಅನೇಕರಲ್ಲಿ ಆಸೆ ಇರುತ್ತದೆ. ಕೆಲಸದ ಉದ್ದೇಶಕ್ಕೋ, ಮನರಂಜನೆಗಾಗಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಲ್ಯಾಪ್​ಟಾಪ್​ ಅಗತ್ಯವಾಗಿ ನೆರವಿಗೆ ಬರುತ್ತದೆ.

ಸಹಜವಾಗಿ ಹೊಸ ಲ್ಯಾಪ್​ಟಾಪ್​ ಖರೀದಿಸುವಾಗ ನೀವು ಅದರ ಮೇಲೆ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಆಗಬಹುದಾದ ಹೆಚ್ಚಿನ ನಷ್ಟ ತಪ್ಪಿಸಲು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.

ಮೊದಲನೆಯದಾಗಿ, ಮಾರುಕಟ್ಟೆಯಲ್ಲಿರು ಲೇಟೆಸ್ಟ್​ ಮಾಡಲ್​ ಲ್ಯಾಪ್​ಟಾಪ್​ ಯಾವುದೆಂದು ತಿಳಿದುಕೊಳ್ಳಿ. ಇದನ್ನು ಆನ್​ಲೈನ್​ ಮತ್ತು ಆಫ್​ಲೈನ್​ ಎರಡರಲ್ಲೂ ಪರಿಶೀಲಿಸಬಹುದು.

ಎರಡನೇಯದಾಗಿ, ನಿಮ್ಮ ಬಜೆಟ್​ ಅನ್ನು ನೋಡಿಕೊಳ್ಳಿ. ನಿಮ್ಮ ಬಜೆಟ್​ಗೆ ತಕ್ಕಂತೆ ಹುಡುಕಿ. ಮುಂದೊಂದು ದಿನ ಲ್ಯಾಪ್​ಟಾಪ್​ ಹೊರೆ ಎನಿಸಬಾರದು.

ಲ್ಯಾಪ್​ಟಾಪ್​ ತೆಗೆದುಕೊಳ್ಳುವಾಗ, ಅದರ ರ್ಯಾಮ್​, ಸ್ಪೇಸ್​ ಮತ್ತು ಹಾರ್ಡ್​ ಡಿಸ್ಕ್​ನಂತಹ ಇತರ ವಿಷಯಗಳನ್ನು ನೋಡಿಕೊಳ್ಳಿ. ಗ್ಯಾರಂಟಿಯನ್ನು ಖಂಡಿತವಾಗಿ ತಿಳಿದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...