ಮನೆಯಲ್ಲೊಂದು ಲ್ಯಾಪ್ಟಾಪ್ ಇದ್ದರೆಷ್ಟು ಚೆಂದ ಎಂದು ಅನೇಕರಲ್ಲಿ ಆಸೆ ಇರುತ್ತದೆ. ಕೆಲಸದ ಉದ್ದೇಶಕ್ಕೋ, ಮನರಂಜನೆಗಾಗಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಲ್ಯಾಪ್ಟಾಪ್ ಅಗತ್ಯವಾಗಿ ನೆರವಿಗೆ ಬರುತ್ತದೆ.
ಸಹಜವಾಗಿ ಹೊಸ ಲ್ಯಾಪ್ಟಾಪ್ ಖರೀದಿಸುವಾಗ ನೀವು ಅದರ ಮೇಲೆ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಆಗಬಹುದಾದ ಹೆಚ್ಚಿನ ನಷ್ಟ ತಪ್ಪಿಸಲು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.
ಮೊದಲನೆಯದಾಗಿ, ಮಾರುಕಟ್ಟೆಯಲ್ಲಿರು ಲೇಟೆಸ್ಟ್ ಮಾಡಲ್ ಲ್ಯಾಪ್ಟಾಪ್ ಯಾವುದೆಂದು ತಿಳಿದುಕೊಳ್ಳಿ. ಇದನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಪರಿಶೀಲಿಸಬಹುದು.
ಎರಡನೇಯದಾಗಿ, ನಿಮ್ಮ ಬಜೆಟ್ ಅನ್ನು ನೋಡಿಕೊಳ್ಳಿ. ನಿಮ್ಮ ಬಜೆಟ್ಗೆ ತಕ್ಕಂತೆ ಹುಡುಕಿ. ಮುಂದೊಂದು ದಿನ ಲ್ಯಾಪ್ಟಾಪ್ ಹೊರೆ ಎನಿಸಬಾರದು.
ಲ್ಯಾಪ್ಟಾಪ್ ತೆಗೆದುಕೊಳ್ಳುವಾಗ, ಅದರ ರ್ಯಾಮ್, ಸ್ಪೇಸ್ ಮತ್ತು ಹಾರ್ಡ್ ಡಿಸ್ಕ್ನಂತಹ ಇತರ ವಿಷಯಗಳನ್ನು ನೋಡಿಕೊಳ್ಳಿ. ಗ್ಯಾರಂಟಿಯನ್ನು ಖಂಡಿತವಾಗಿ ತಿಳಿದುಕೊಳ್ಳಿ.