ಕೋವಿಡ್ ನಂತರದ ಕಾಲಘಟ್ಟದಲ್ಲಿ ಐಟಿ ಸೇವೆಗಳಿಗೆ ಭಾರೀ ಬೇಡಿಕೆ ಬರುವ ಸಾಧ್ಯತೆಗಳ ನಡುವೆಯೇ ಮುಂಬರುವ ತಿಂಗಳುಗಳಲ್ಲಿ 40,000ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಹೈರಿಂಗ್ ಮಾಡುವುದಾಗಿ ದೇಶದ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಘೋಷಿಸಿದೆ.
ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಲಾಭ ಗಳಿಸಿರುವ ಟಿಸಿಎಸ್, ದೇಶದ ಇತರೆ ಐಟಿ ಕಂಪನಿಗಳು ಹಾಗೂ ಭಾರತೀಯ ಟೆಕ್ ಸ್ಟಾರ್ಟ್‌ಅಪ್‌ಗಳೊಂದಿಗೆ ಪ್ರತಿಭಾ ಸಮರದಲ್ಲಿ ನಿರತವಾಗಿದೆ.
‘ಆರೋಗ್ಯ’ದಾಯಕ ಕುಂಬಳಕಾಯಿ ದೋಸೆ
ತನ್ನಲ್ಲಿರುವ ಉದ್ಯೋಗಿಗಳು ಬೇರೆ ಸಂಸ್ಥೆಗಳಿಗೆ ಹೋಗುವ ಪ್ರಮಾಣವು 11.2%ನಷ್ಟು ಇದೆ ಎಂದು ಟಿಸಿಎಸ್ ತಿಳಿಸಿದ್ದು, ಮುಂದಿನ 2-3 ತ್ರೈಮಾಸಿಕಗಳಲ್ಲಿ ದೊಡ್ಡ ಮಟ್ಟದಲ್ಲಿ ಈ ದರ ಮುಂದುವರೆಯಲಿದೆ ಎಂದು ಟಿಸಿಎಸ್‌ನ ಎಚ್‌ಆರ್ ಮುಖ್ಯಸ್ಥ ಮಿಲಿಂದ್ ಲಕ್ಕಡ್ ತಿಳಿಸಿದ್ದಾರೆ.
2021-22ರ ವಿತ್ತೀಯ ವರ್ಷದ ಮೊದಲ ಅರ್ಧದಲ್ಲಿ ಅದಾಗಲೇ 43,000 ಮಂದಿಯನ್ನು ಹೈರ್ ಮಾಡಿರುವ ಟಿಸಿಎಸ್, ಇದೀಗ ಎರಡನೇ ಅರ್ಧದಲ್ಲಿ 35,000 ಮಂದಿಯನ್ನು ಹೈರ್ ಮಾಡಲು ನೋಡುತ್ತಿದೆ. ಈ ಮೂಲಕ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟಾರೆ 78,000 ಮಂದಿಯನ್ನು ಹೈರ್ ಮಾಡಲು ಟಿಸಿಎಸ್ ಇಚ್ಛಿಸಿದೆ.