alex Certify ‘ಆರೋಗ್ಯ’ದಾಯಕ ಕುಂಬಳಕಾಯಿ ದೋಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆರೋಗ್ಯ’ದಾಯಕ ಕುಂಬಳಕಾಯಿ ದೋಸೆ

ಬೇಕಾಗುವ ಪದಾರ್ಥಗಳು: ಅಕ್ಕಿ 2 ಕಪ್, ಕಾಯಿ ತುರಿ 1 ಕಪ್, ಉದ್ದಿನ ಬೇಳೆ ಕಾಲು ಕಪ್, ಕುಂಬಳಕಾಯಿ ತಿರುಳು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಕಾಲು ಕಪ್.

ಸೆಂಟ್ರಲ್‌ ವಿಸ್ತಾದ ಹೊಸ ಕಟ್ಟಡವೇ ’ನೈಜ ಸಂಸತ್‌’ ಆಗಲಿದೆ ಎಂದ ವಿನ್ಯಾಸಕಾರ

ತಯಾರಿಸುವ ವಿಧಾನ: ಅಕ್ಕಿ, ಉದ್ದಿನ ಬೇಳೆಯನ್ನು ತೊಳೆದು 4 ಗಂಟೆ ನೆನೆಸಿಡಿ, ತೊಳೆದ ನೀರು ಬಸಿದು ಕುಂಬಳಕಾಯಿ ತಿರುಳು, ತೆಂಗಿನಕಾಯಿ, ನೆನೆಸಿದ ಅಕ್ಕಿ, ಉದ್ದಿನ ಬೇಳೆಯೊಂದಿಗೆ ಹಾಕಿ ನುಣ್ಣಗೆ ರುಬ್ಬಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 1 ಗಂಟೆ ಮುಚ್ಚಿಡಿ.

ಕಾವಲಿ ಕಾದ ನಂತರ ದೋಸೆ ಮಾಡಿ. ನಂತರ ತುಪ್ಪ ಸವರಿ ಎರಡೂ ಬದಿ ಬೇಯಿಸಿ, ಬಿಸಿಬಿಸಿ ಕುಂಬಳಕಾಯಿ ದೋಸೆ ಈಗ ಸಿಧ್ಧ. ಇದು ಈರುಳ್ಳಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...