alex Certify ಉದ್ಯೋಗದ ನಿರೀಕ್ಷೆಯಲ್ಲಿದ್ದ ನವ ಪದವೀಧರರಿಗೆ TCS ನಿಂದ ಬಂಪರ್‌ ಅವಕಾಶ: ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದ ನವ ಪದವೀಧರರಿಗೆ TCS ನಿಂದ ಬಂಪರ್‌ ಅವಕಾಶ: ಇಲ್ಲಿದೆ ಮುಖ್ಯ ಮಾಹಿತಿ

ಇತ್ತೀಚೆಗೆ ಪಾಸ್‌ಔಟ್ ಆಗಿರುವವರನ್ನು ತನ್ನ ಬ್ಯುಸಿನೆಸ್ ಪ್ರೋಸೆಸ್ ಸರ್ವೀಸಸ್ (ಬಿಪಿಎಸ್‌) ಕ್ಷೇತ್ರದಲ್ಲಿರುವ ಖಾಲಿ ಹುದ್ದೆಗಳಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಹ್ವಾನಿಸಿದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪಡೆದಿರುವವರು ದೇಶದ ಅತಿ ದೊಡ್ಡ ಐಟಿ ಕಂಪನಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಕಂಪನಿಯ ನೋಟಿಫಿಕೇಶನ್ ಪ್ರಕಾರ, ಅಭ್ಯರ್ಥಿಗಳನ್ನು ಮೊದಲಿಗೆ ತರಬೇತಿಗೆ ಹೈರಿಂಗ್ ಮಾಡಲಾಗುತ್ತದೆ. ಆ ವೇಳೆ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಕಾಗ್ನಿಟಿವ್‌ ಬ್ಯುಸಿನೆಸ್ ಕಾರ್ಯಚರಣೆ (ಸಿಬಿಓ), ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳು ಮತ್ತು ವಿಮೆ (ಬಿಎಸ್‌ಎಸ್‌ಐ) ಮತ್ತು ಜೀವ ವಿಜ್ಞಾನಗಳ ಕ್ಷೇತ್ರದಲ್ಲಿ ಉದ್ಯೋಗಗಳನ್ನು ನೀಡಲಾಗುತ್ತದೆ.

ಟಿಸಿಎಸ್‌ ಬಿಪಿಎಸ್ ಅರ್ಹತೆ

ಬಿಪಿಎಸ್ ಭಾಗವಾಗಿ ಉದ್ಯೋಗ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ, ಬಿಎ, ಬಿಬಿಎ, ಬಿಸಿಎಸ್‌, ಬಿಸಿಎ ಅಥವಾ ಇತರೆ ಪ್ರಾಪ್ತವಾದ ಪದವಿ ಕೋರ್ಸ್‌ಗಳನ್ನು ಪೂರೈಸಿರಬೇಕು. 2022ರಲ್ಲಿ ಪದವಿ ಪೂರೈಸಿದವರು ಮಾತ್ರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಬ್ಯಾಕ್‌ಲಾಗ್ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಮುಖ್ಯವಾದ ದಿನಾಂಕಗಳು

ಅರ್ಜಿ ಪ್ರಕ್ರಿಯೆಯನ್ನು ಟಿಸಿಎಸ್‌ ಅದಾಗಲೇ ತೆರೆದಿದೆ. ಟಿಸಿಎಸ್‌ನ ಅಧಿಕೃತ ಜಾಲತಾಣ https://nextstep.tcs.com/campus/#/ಗೆ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 7. ಲಿಖಿತ ಪರೀಕ್ಷೆ ಜನವರಿ 26ರಂದು ನಡೆಯಲಿದೆ.

ಹೈರಿಂಗ್ ಪ್ರಕ್ರಿಯೆ

ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಂಖ್ಯಿಕ ಸಾಮರ್ಥ್ಯ, ಶಬ್ದಿಕ ಕ್ಷಮತೆ ಮತ್ತು ಕಾರಣೀಕರಿಸುವ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗುವುದು. ಲಿಖಿತ ಪರೀಕ್ಷೆಯ ಅವಧಿ 60 ನಿಮಿಷಗಳು.

ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದವರನ್ನು ವೈಯಕ್ತಿಕ ಸಂದರ್ಶನಗಳಿಗೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆಗಳ ಫಲಿತಾಂಶ ಘೋಷಣೆಯಾಗುತ್ತಲೇ ಟಿಸಿಎಸ್‌ ಸಂದರ್ಶನಗಳ ದಿನಾಂಕಗಳನ್ನು ಘೋಷಿಸುವ ಸಾಧ್ಯತೆ ಇದೆ. ಸಂದರ್ಶನ ನೀಡಲು ಅಭ್ಯರ್ಥಿಗಳು ಟಿಸಿಎಸ್‌ ಕೇಂದ್ರವೊಂದಕ್ಕೆ ಭೇಟಿ ನೀಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...