
ಕಂಪನಿಯ ನೋಟಿಫಿಕೇಶನ್ ಪ್ರಕಾರ, ಅಭ್ಯರ್ಥಿಗಳನ್ನು ಮೊದಲಿಗೆ ತರಬೇತಿಗೆ ಹೈರಿಂಗ್ ಮಾಡಲಾಗುತ್ತದೆ. ಆ ವೇಳೆ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಕಾಗ್ನಿಟಿವ್ ಬ್ಯುಸಿನೆಸ್ ಕಾರ್ಯಚರಣೆ (ಸಿಬಿಓ), ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳು ಮತ್ತು ವಿಮೆ (ಬಿಎಸ್‌ಎಸ್‌ಐ) ಮತ್ತು ಜೀವ ವಿಜ್ಞಾನಗಳ ಕ್ಷೇತ್ರದಲ್ಲಿ ಉದ್ಯೋಗಗಳನ್ನು ನೀಡಲಾಗುತ್ತದೆ.
ಟಿಸಿಎಸ್ ಬಿಪಿಎಸ್ ಅರ್ಹತೆ
ಬಿಪಿಎಸ್ ಭಾಗವಾಗಿ ಉದ್ಯೋಗ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ, ಬಿಎ, ಬಿಬಿಎ, ಬಿಸಿಎಸ್, ಬಿಸಿಎ ಅಥವಾ ಇತರೆ ಪ್ರಾಪ್ತವಾದ ಪದವಿ ಕೋರ್ಸ್‌ಗಳನ್ನು ಪೂರೈಸಿರಬೇಕು. 2022ರಲ್ಲಿ ಪದವಿ ಪೂರೈಸಿದವರು ಮಾತ್ರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಬ್ಯಾಕ್‌ಲಾಗ್ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಮುಖ್ಯವಾದ ದಿನಾಂಕಗಳು
ಅರ್ಜಿ ಪ್ರಕ್ರಿಯೆಯನ್ನು ಟಿಸಿಎಸ್ ಅದಾಗಲೇ ತೆರೆದಿದೆ. ಟಿಸಿಎಸ್‌ನ ಅಧಿಕೃತ ಜಾಲತಾಣ https://nextstep.tcs.com/campus/#/ಗೆ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 7. ಲಿಖಿತ ಪರೀಕ್ಷೆ ಜನವರಿ 26ರಂದು ನಡೆಯಲಿದೆ.
ಹೈರಿಂಗ್ ಪ್ರಕ್ರಿಯೆ
ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಂಖ್ಯಿಕ ಸಾಮರ್ಥ್ಯ, ಶಬ್ದಿಕ ಕ್ಷಮತೆ ಮತ್ತು ಕಾರಣೀಕರಿಸುವ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗುವುದು. ಲಿಖಿತ ಪರೀಕ್ಷೆಯ ಅವಧಿ 60 ನಿಮಿಷಗಳು.
ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದವರನ್ನು ವೈಯಕ್ತಿಕ ಸಂದರ್ಶನಗಳಿಗೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆಗಳ ಫಲಿತಾಂಶ ಘೋಷಣೆಯಾಗುತ್ತಲೇ ಟಿಸಿಎಸ್ ಸಂದರ್ಶನಗಳ ದಿನಾಂಕಗಳನ್ನು ಘೋಷಿಸುವ ಸಾಧ್ಯತೆ ಇದೆ. ಸಂದರ್ಶನ ನೀಡಲು ಅಭ್ಯರ್ಥಿಗಳು ಟಿಸಿಎಸ್ ಕೇಂದ್ರವೊಂದಕ್ಕೆ ಭೇಟಿ ನೀಡಬೇಕು.