alex Certify ಮೇಘನಾ ರಾಜ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ತತ್ಸಮ ತದ್ಭವ’ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಘನಾ ರಾಜ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ತತ್ಸಮ ತದ್ಭವ’ ಟೀಸರ್ ರಿಲೀಸ್

ಪ್ರಜ್ವಲ್ ದೇವರಾಜ್ ಮತ್ತು ಮೇಘನಾ ರಾಜ್ ಸರ್ಜಾ ಅಭಿನಯದ ‘ತತ್ಸಮ ತದ್ಬವ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ.

ಟೀಸರ್ ನಲ್ಲಿ ಮೇಘನಾ ರಾಜ್ ತನ್ನ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡುತ್ತಿರುವುದನ್ನು ಕಾಣಬಹುದು. ಪ್ರಜ್ವಲ್ ದೇವರಾಜ್ ಪ್ರಕರಣವೊಂದರ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ಸಿನಿಮಾವನ್ನು ಪನ್ನಗಾಭರಣ ನಿರ್ದೇಶಿಸಿದ್ದು,. ಶ್ರೀನಿವಾಸ್ ರಾಮಯ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ನಟಿ ಮೇಘನಾ ರಾಜ್ ತನ್ನ ಪತಿ ಚಿರಂಜೀವಿ ಸರ್ಜಾ ಮೃತಪಟ್ಟ ಬಳಿಕ ತಮ್ಮ ಮಗನನ್ನು ನೋಡಿಕೊಳ್ಳುವುದರ ಮೂಲಕ ಕಾಲ ಕಳೆದಿದ್ದರು. ಈಗ ‘ತತ್ಸಮ ತದ್ಬವ’ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...