alex Certify ಗಮನಿಸಿ: ಜುಲೈ 17 ರಿಂದ ಹೆಚ್ಚಾಗಲಿದೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಜುಲೈ 17 ರಿಂದ ಹೆಚ್ಚಾಗಲಿದೆ ಟಾಟಾ ಮೋಟಾರ್ಸ್ ಕಾರುಗಳ ಬೆಲೆ

ಟಾಟಾ ಕಂಪನಿಯ ವಾಹನ ಕೊಳ್ಳಲು ಮುಂದಾಗಿದ್ದವರಿಗೆ ತುಸು ಶಾಕಿಂಗ್ ಸುದ್ದಿಯಿದು. ಟಾಟಾ ಮೋಟಾರ್ಸ್ ಭಾರತದಲ್ಲಿ ತನ್ನ ಆಂತರಿಕ ದಹನಕಾರಿ ಎಂಜಿನ್ (ICE) ಮತ್ತು ಎಲೆಕ್ಟ್ರಿಕ್ ವೆಹಿಕಲ್ (EV) ಗಳ ತನ್ನ ಸಂಪೂರ್ಣ ಶ್ರೇಣಿಯ ಬೆಲೆಗಳನ್ನು ಜುಲೈ 17 ರಿಂದ ಹೆಚ್ಚಿಸುವುದಾಗಿ ಘೋಷಿಸಿದೆ.

ಸರಾಸರಿ 0.6 ರಷ್ಟು ಬೆಲೆ ಹೆಚ್ಚಳವಾಗಲಿದೆ ಎಂದಿದೆ. ತನ್ನ ಇನ್ ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಬೆಲೆಗಳ ಹೆಚ್ಚಳದ ಹಿಂದಿನ ಕಾರಣವೆಂದು ಟಾಟಾ ಮೋಟಾರ್ಸ್ ಉಲ್ಲೇಖಿಸಿದೆ. ಆದಾಗ್ಯೂ ಕಾರು ತಯಾರಕರು ಜುಲೈ 16 ರವರೆಗೆ ತಮ್ಮ ಯಾವುದೇ ಮಾದರಿಗಳನ್ನು ಬುಕ್ ಮಾಡುವ ಅಥವಾ ಜುಲೈ 31 ರವರೆಗೆ ಅದರ ಯಾವುದೇ ಕಾರುಗಳ ವಿತರಣೆಯನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಬೆಲೆ ಹೊರೆಯಾಗುವುದಿಲ್ಲ ಎಂದಿದ್ದಾರೆ. ಅಂದರೆ ಕಂಪನಿ ಪ್ರಸ್ತುತ ಬೆಲೆಯನ್ನೇ ಪಾವತಿಸುತ್ತಿತ್ತು ಹೆಚ್ಚಿನ ದರ ಇರುವುದಿಲ್ಲ ಎಂದಿದೆ.

ಪ್ರಸ್ತುತ ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್‌ಬ್ಯಾಕ್, ಟಿಗೊರ್ ಕಾಂಪ್ಯಾಕ್ಟ್ ಸೆಡಾನ್, ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಪಂಚ್ ಮೈಕ್ರೋ-ಎಸ್‌ಯುವಿ, ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿ, ಹಾಗೆಯೇ ಹ್ಯಾರಿಯರ್ ಮತ್ತು ಸಫಾರಿ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಒಳಗೊಂಡಿರುವ ಏಳು ICE ಮಾದರಿಗಳ ಶ್ರೇಣಿಯನ್ನು ಹೊಂದಿದೆ.

ಇದರೊಂದಿಗೆ EV ಶ್ರೇಣಿಯು ಮೂರು ಮಾದರಿಗಳನ್ನು ಒಳಗೊಂಡಿದೆ. ಅವುಗಳೆಂದರೆ Tiago RV, Tigor EV ಮತ್ತು Nexon EV. Nexon EV ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಇವಿ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...