alex Certify ಜಾಗ್ವಾರ್, ಲ್ಯಾಂಡ್ ರೋವರ್ ಸಿಇಒ ರಾಜೀನಾಮೆ: ಟಾಟಾ ಮೋಟಾರ್ಸ್ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗ್ವಾರ್, ಲ್ಯಾಂಡ್ ರೋವರ್ ಸಿಇಒ ರಾಜೀನಾಮೆ: ಟಾಟಾ ಮೋಟಾರ್ಸ್ ಘೋಷಣೆ

ಟಾಟಾ ಮೋಟಾರ್ಸ್ ಒಡೆತನದ ಐಷಾರಾಮಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಬೊಳ್ಳೋರ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಲಿದ್ದಾರೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಥಿಯೆರಿ ಬೊಳ್ಳೋರ್ ಅವರು ಎರಡು ವರ್ಷಗಳ ಕಾಲ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.
ಆಡ್ರಿಯನ್ ಮಾರ್ಡೆಲ್ ಅವರು ಬುಧವಾರದಿಂದ ಹಂಗಾಮಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆಡ್ರಿಯನ್ ಮಾರ್ಡೆಲ್ 32 ವರ್ಷಗಳಿಂದ ಜಾಗ್ವಾರ್ ಲ್ಯಾಂಡ್ ರೋವರ್‌ನ ಭಾಗವಾಗಿದ್ದಾರೆ ಮತ್ತು ಪ್ರಸ್ತುತ ಅದರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ.

COVID-19 ಸಾಂಕ್ರಾಮಿಕ ರೋಗದಿಂದ ದೊಡ್ಡ ಹೊಡೆತವನ್ನು ಪಡೆದ ನಂತರ ಬ್ರಿಟನ್‌ನ ಅತಿದೊಡ್ಡ ಕಾರು ತಯಾರಕರನ್ನು ಲಾಭಕ್ಕೆ ಹಿಂದಿರುಗಿಸಲು JLR 2020 ರಲ್ಲಿ ಮಾಜಿ ರೆನಾಲ್ಟ್ ಬಾಸ್ ಬೊಳ್ಳೋರ್ ಅವರನ್ನು CEO ಆಗಿ ಆಯ್ಕೆ ಮಾಡಿತ್ತು. ಅವರ ರಾಜೀನಾಮೆ ಡಿಸೆಂಬರ್ 31 ರಿಂದ ಜಾರಿಗೆ ಬರಲಿದೆ ಎಂದು ಜೆಎಲ್ಆರ್ ತಿಳಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...