ಕೋವಿಡ್ ಕಾರಣದಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಉಂಟಾದ ಏರಿಕೆಯನ್ನು ಗ್ರಾಹಕರಿಗೆ ಮುಲಾಜಿಲ್ಲದೇ ವರ್ಗಾಯಿಸುತ್ತಿರುವ ಕಾರು ಉತ್ಪಾದಕರಾದ ಹೋಂಡಾ, ಟಾಟಾ ಮೋಟಾರ್ಸ್ ಹಾಗೂ ರೆನೋ ಮುಂದಿನ ವರ್ಷ ಜನವರಿಯಿಂದ ತಮ್ಮ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆ ಮಾಡಲಿವೆ.
ಮಾರುತಿ ಸುಜ಼ುಕಿ, ಆಡಿ ಹಾಗೂ ಮರ್ಸಿಡಿಸ್ ಬೆಂಜ಼್ ಮುಂದಿನ ತಿಂಗಳಿಂದ ತಮ್ಮ ಕಾರುಗಳ ಬೆಲೆಯನ್ನು ಏರಿಸುವುದಾಗಿ ಅದಾಗಲೇ ಘೋಷಿಸಿವೆ. ತನ್ನ ಕಾರುಗಳ ವಿವಿಧ ಮಾಡೆಲ್‌ಗಳಿಗೆ ಭಿನ್ನವಾದ ಮಟ್ಟದಲ್ಲಿ ಬೆಲೆ ಏರಿಕೆ ಮಾಡುವುದಾಗಿ ಮಾರುತಿ ತಿಳಿಸಿದರೆ, ಮರ್ಸಿಡಿಸ್ ತನ್ನ ಆಯ್ದ ಮಾಡೆಲ್‌ಗಳ ಬೆಲೆಯಲ್ಲಿ 2%ನಷ್ಟು ಏರಿಕೆ ಮಾಡುವುದಾಗಿ ಹೇಳಿದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯೊಂದಿಗೆ ಹೊಸ ಫೀಚರ್‌ಗಳನ್ನು ಒದಗಿಸಲು ಈ ಏರಿಕೆಯನ್ನು ಸರ್ಮರ್ಥಿಸಿಕೊಳ್ಳುತ್ತಿವೆ ಕಾರು ಉತ್ಪಾದಕ ಸಂಸ್ಥೆಗಳು. ಆಡಿ ಸಹ ತನ್ನ ಆಯ್ದ ಮಾಡೆಲ್‌ಗಳ ಬೆಲೆಯಲ್ಲಿ 3%ನಷ್ಟು ಹೆಚ್ಚಳ ಮಾಡುತ್ತಾ ಬಂದಿದೆ.
ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಬಸ್ ಪಾಸ್ ವಿತರಣೆ
ಇದೇ ವರ್ಷದ ಆಗಸ್ಟ್‌ನಲ್ಲಿ ಸಹ ಆಟೋಮೊಬೈಲ್ ದಿಗ್ಗಜರು ತಮ್ಮ ವಾಹನಗಳ ಬೆಲೆಯನ್ನು ಒಂದು ಸುತ್ತು ಏರಿಸಿದ್ದವು. ಉಕ್ಕು, ಅಲ್ಯೂಮಿನಿಯಂ, ತಾಮ್ರ, ಪ್ಲಾಸ್ಟಿಕ್ ಹಾಗೂ ಇತರೆ ಲೋಹಗಳ ಬೆಲೆಗಳಲ್ಲಿ ಏರಿಕೆಯಾಗಿರುವ ಕಾರಣ ಕಾರುಗಳ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿರುವುದು ಸಹಜವೇ ಆಗಿದೆ.