alex Certify BIG NEWS: 921 ಎಲೆಕ್ಟ್ರಿಕ್​ ಬಸ್ ಗಳಿಗೆ​ ಆರ್ಡರ್​ ಮಾಡಿದ ಬಿಎಂಟಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 921 ಎಲೆಕ್ಟ್ರಿಕ್​ ಬಸ್ ಗಳಿಗೆ​ ಆರ್ಡರ್​ ಮಾಡಿದ ಬಿಎಂಟಿಸಿ

ದೆಹಲಿ ಸಾರಿಗೆ ಸಂಸ್ಥೆ ಮತ್ತು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ ಎಲೆಕ್ಟ್ರಿಕ್​ ಬಸ್​ಗಳ ಆರ್ಡರ್​ ಪಡೆದ ಟಾಟಾ ಮೋಟಾರ್ಸ್​ ಇದೀಗ ಬೆಂಗಳೂರು ಮೆಟ್ರೋಪಾಲಿಟನ್​ ಸಾರಿಗೆ ನಿಗಮದಿಂದ (ಬಿಎಂಟಿಸಿ) ಯಿಂದ 921 ಎಲೆಕ್ಟ್ರಿಕ್​ ಬಸ್​ಗಳ ಆರ್ಡರ್​ ಪಡೆದುಕೊಂಡಿದೆ.

ಟೆಂಡರ್​ ಅಡಿಯಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಒಪ್ಪಂದದ ಪ್ರಕಾರ ಟಾಟಾ ಮೋಟಾರ್ಸ್​ 12 ವರ್ಷಗಳ ಅವಧಿಗೆ 12-ಮೀಟರ್​ ಎಲೆಕ್ಟ್ರಿಕ್​ ಬಸ್​ಗಳನ್ನು ಪೂರೈಸುತ್ತದೆ ಜೊತೆಗೆ ನಿರ್ವಹಿಸುತ್ತದೆ.

“ಟಾಟಾ ಸ್ಟಾರ್​ ಬಸ್​ ಸಸ್ಟೆನಬಲ್​ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಉನ್ನತ ಮಟ್ಟದ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಾಹನವಾಗಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಬಿಎಂಟಿಸಿ ಎಂಡಿ ಜಿ. ಸತ್ಯವತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ “ಬೆಂಗಳೂರು ಸ್ವಚ್ಛ, ಸುಸ್ಥಿರ ನಗರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಕ್ಷೇತ್ರಕ್ಕೆ ಈ ಆರ್ಡರ್​ ಅತ್ಯುನ್ನತವಾಗಿದೆ ಎಂದಿದ್ದಾರೆ.

ಟಾಟಾ ಮೋಟಾರ್ಸ್​ ಈಗಾಗಲೇ ದೆಹಲಿ ಸಾರಿಗೆ ಸಂಸ್ಥೆಯಿಂದ 1,500 ಎಲೆಕ್ಟ್ರಿಕ್​ ಬಸ್​, ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ 1,180 ಎಲೆಕ್ಟ್ರಿಕ್​ ಬಸ್​ಗಳಿಗೆ ಕಳೆದ 30 ದಿನಗಳಲ್ಲಿ ಆರ್ಡರ್​ ಸ್ವೀಕರಿಸಿದೆ.

ಈ ಯೋಜನೆಯು 12-ಮೀಟರ್​ ಲೋ-ಫ್ಲೋರ್​ ಎಸಿ, 12-ಮೀಟರ್​ ಸ್ಟ್ಯಾಂಡರ್ಡ್​-ಫ್ಲೋರ್​ ನಾನ್​-ಎಸಿ, 9-ಮೀಟರ್​ ಸ್ಟ್ಯಾಂಡರ್ಡ್​-ಫ್ಲೋರ್​ ಎಸಿ ಮತ್ತು 9-ಮೀಟರ್​ ಸ್ಟ್ಯಾಂಡರ್ಡ್​-ಫ್ಲೋರ್​ ನಾನ್​-ಎಸಿ ಬಸ್​ಗಳನ್ನು ಒಳಗೊಂಡಂತೆ ನಾಲ್ಕು ವರ್ಗಗಳ ಇ- ಬಸ್​ಗಳ ಖರೀದಿಯನ್ನು ಒಳಗೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...