alex Certify BIG NEWS: ಯಾರ ಪಾಲಾಗಿದೆ ಏರ್​ ಇಂಡಿಯಾ…? ಕುತೂಹಲಕ್ಕೆ ಕಾರಣವಾಯ್ತು ಕೇಂದ್ರ ಸರ್ಕಾರದ ಈ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯಾರ ಪಾಲಾಗಿದೆ ಏರ್​ ಇಂಡಿಯಾ…? ಕುತೂಹಲಕ್ಕೆ ಕಾರಣವಾಯ್ತು ಕೇಂದ್ರ ಸರ್ಕಾರದ ಈ ಹೇಳಿಕೆ

ಸರ್ಕಾರದ ಪಾಲಿಗೆ ಬಿಳಿ ಆನೆಯಂತಾಗಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್​ ಖರೀದಿ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.

ಹರಾಜಿನ ಮೂಲಕ ನಡೆದ ಮಾರಾಟ ಪ್ರಕ್ರಿಯೆಯಲ್ಲಿ ಸರ್ಕಾರವು 15000 ಕೋಟಿಯಿಂದ 20 ಸಾವಿರ ಕೋಟಿಗಳವರೆಗೆ ಮೀಸಲು ಬೆಲೆ ನಿಗದಿ ಮಾಡಿತ್ತು ಎಂದು ತಿಳಿದುಬಂದಿದೆ.

ಆದರೆ ಈ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಟಾಟಾ ಮೀಸಲು ದರಕ್ಕಿಂತ 3000 ಕೋಟಿ ಹಾಗೂ ಸ್ಪೈಸ್​ ಜೆಟ್​ ಅಜಯ್​ ಸಿಂಗ್​​ರಿಗಿಂತ 5000 ಕೋಟಿ ಅಧಿಕ ಹಣಕ್ಕೆ ಮಹಾರಾಜನನ್ನು ಕೊಂಡುಕೊಂಡಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಷೇರು ಮಾರಾಟವು ನವೆಂಬರ್-ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಏರ್​ ಇಂಡಿಯಾ ಬಂಡವಾಳ ಹೂಡಿಕೆ ಅನುಮೋದನೆ ನೀಡಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರವು ತಳ್ಳಿ ಹಾಕಿದೆ. ಇದು ಅಂತಿಮಗೊಂಡ ಬಳಿಕ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಹೇಳಿದೆ. ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ತನ್ನ ಟ್ವೀಟ್​ ಮೂಲಕ ಮಾಧ್ಯಮಗಳ ವರದಿಯನ್ನು ‘ತಪ್ಪು’ ಎಂದು ಹೇಳಿದೆ.

ಏರ್​ ಇಂಡಿಯಾ ಮರುಹೂಡಿಕೆಗೆ ಕೇಂದ್ರ ಸರ್ಕಾರವು ಬಿಡ್​​ ಸಲ್ಲಿಸಲು ಅನುಮೋದನೆ ನೀಡಿರುವ ಬಗ್ಗೆ ಮಾಧ್ಯಮಗಳ ವರದಿಯು ತಪ್ಪಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಟ್ವೀಟ್​ ಮಾಡಲಾಗಿದೆ.

ಟಾಟಾ ಸಮೂಹದ ಪ್ರತಿನಿಧಿಗಳು ಹಾಗೂ ಅಜಯ್​ ಸಿಂಗ್​ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಕಾರ್ಯದರ್ಶಿಗಳ ಸಮಿತಿಯು ಏರ್​ಲೈನ್​ನ ಮೀಸಲು ಬೆಲೆಯನ್ನು ಅಂತಿಮಗೊಳಿಸಿತ್ತು ಎಂದು ಹೇಳಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...