ಮೊಬೈಲ್ ಉತ್ಪಾದಕ ಕಂಪನಿ ಆಪಲ್ ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ಐಫೋನ್ 14 ಅನ್ನು ತಯಾರಿಸಲು ಉದ್ದೇಶಿಸಿದೆ. ವಿಶ್ವಾದ್ಯಂತ ಐಫೋನ್ಗಳ ಪ್ರೈಮರಿ ಪ್ರೊಡ್ಯೂಸರ್ ಚೈನಾ ಎನಿಸಿಕೊಂಡಿದೆ. ಇದೀಗ ಚೈನಾದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು, ಆಪಲ್ ತನ್ನ ಹೊಸ ಐಫೋನ್ ಅನ್ನು ಭಾರತದಲ್ಲಿ ಉತ್ಪಾದಿಸಲು ಪೂರೈಕೆದಾರರೊಂದಿಗೆ ಸಹಕರಿಸುತ್ತದೆ.
ಆಪಲ್ ಕಂಪನಿಗೆ ಹಲವಾರು ಐಫೋನ್ಗಳನ್ನು ತಯಾರಿಸುವ ಫಾಕ್ಸ್ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸೇರಿದಂತೆ ಕೆಲವು ಭಾರತೀಯ ಪಾಲುದಾರರನ್ನು ಸಹ ಹೊಂದಿದೆ. ಈ ನಡುವೆ ಪ್ರಮುಖ ಭಾರತೀಯ ಕಂಪನಿ ಟಾಟಾ ಗ್ರೂಪ್ ಶೀಘ್ರದಲ್ಲೇ ಭಾರತದಲ್ಲಿ ಐಪೋನ್ ತಯಾರಿಸಲು ಯೋಜಿಸುತ್ತಿದೆ.
ಮಾಧ್ಯಮ ವರದಿಯ ಪ್ರಕಾರ, ಟಾಟಾ ಗ್ರೂಪ್ ಆಪಲ್ನ ಪ್ರಮುಖ ಪೂರೈಕೆದಾರರಲ್ಲಿ ಒಬ್ಬರಾದ ತೈವಾನ್ನ ಪೂರೈಕೆದಾರ ವಿಸ್ಟ್ರಾನ್ನೊಂದಿಗೆ ಚರ್ಚೆ ನಡೆಸುತ್ತಿದೆ. ಜಂಟಿ ಉದ್ಯಮ ಘಟಕವನ್ನು ಸ್ಥಾಪಿಸಲು ಚರ್ಚೆ ನಡೆಸುತ್ತಿದೆ.
ಟಾಟಾ ಕಂಪನಿಯು ಉಪ್ಪು, ವಾಹನ, ಎಲೆಕ್ಟ್ರಿಕ್ ವಾಹನ ಮತ್ತು ಸ್ಟಾ್ವೇರ್ ಅನ್ನು ಸಹ ತಯಾರಿಸುತ್ತದೆ. ಟಾಟಾದ ಅಂಗಸಂಸ್ಥೆ ಇನ್ಫಿನಿಟಿ ರಿಟೇಲ್ ಗ್ರಾಹಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಪ್ರಮುಖ ರೀಟೇಲ್ ಚೈನ್ ಕ್ರೋಮಾವನ್ನು ಸಹ ಹೊಂದಿದೆ.
ಭಾರತದಲ್ಲಿ ಐಫೋನ್ ತಯಾರಿಸಿದ ಮೊದಲ ಭಾರತೀಯ ಕಂಪನಿಯೂ ಟಾಟಾ ಆಗಿರಬಹುದು. ಇದರಿಂದ ಕಂಪನಿಗೆ ಲಾಭವಾಗುವುದಲ್ಲದೆ, ಭಾರತಕ್ಕೂ ಲಾಭವಾಗಲಿದೆ, ಏಕೆಂದರೆ ದೇಶವು ಜಾಗತಿಕ ಕಂಪನಿಗಳನ್ನು ಭಾರತದಲ್ಲಿ ಉತ್ಪಾದಿಸಲು ಮತ್ತು ಇತರ ದೇಶಗಳಿಗೆ ರಫ್ತು ಮಾಡಲು ಪ್ರೋತ್ಸಾಹಿಸುತ್ತಿದೆ.
ಆಗಾಗ್ಗೆ ಲಾಕ್ಡೌನ್ಗಳ ಪರಿಣಾಮವಾಗಿ ಉತ್ಪಾದನಾ ಕೇಂದ್ರಗಳು ಬಳಲುತ್ತಿರುವ ಚೈನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಆಪಲ್ ಪರ್ಯಾಯ ಉತ್ಪಾದನಾ ಸ್ಥಳಗಳನ್ನು ಹುಡುಕುತ್ತಿದೆ.