ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಒಡಿಶಾದ ಕೊರಾಪಟ್ ಜಿಲ್ಲೆಯಲ್ಲಿ ಬೆಳೆಯುವ ಕಾಫಿಯನ್ನು ದೇಶವಿದೇಶಗಳಿಗೆ ಕೊಂಡೊಯ್ಯಲು ಮುಂದೆ ಬಂದಿರುವ ಟಾಟಾ ಕಾಫಿ, ಇಲ್ಲಿನ ಬೆಳೆಗಾರರಿಂದ ಕಾಫಿ ಬೀಜ ಖರೀದಿ ಮಾಡಲು ಒಪ್ಪಿದೆ.
ದೇಶದ ಅತಿ ದೊಡ್ಡ ಕಾಫಿ ಉತ್ಪಾದಕರಲ್ಲಿ ಒಂದಾದ ಟಾಟಾ ಕಾಫಿ ಕೊರಾಪಟ್ನ ಬುಡಕಟ್ಟು ಜನಾಂಗ ಬೆಳೆಯುವ ಕಾಫಿ ಬೀಜ ಖರೀದಿ ಮಾಡುವ ಮೂಲಕ ಕಾಫಿ ಬೆಳೆಗಾರರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಿಸಲು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಬಲ ಬಂದಂತಾಗಿದೆ ಎಂದು ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
BIG NEWS: ಕೊನೆಗೂ ಪಾರ್ಲಿಮೆಂಟ್ ನಲ್ಲಿ ಪೆಗಾಸಸ್ ಬಗ್ಗೆ ಮೌನ ಮುರಿದ ಮೋದಿ ಸರ್ಕಾರ
“ಬುಡಕಟ್ಟು ಹಾಗೂ ಇತರ ರೈತರಿಂದ ಸುಮಾರು 32 ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗುತ್ತಿದೆ. ನಾವು ಇದನ್ನು ಟಾಟಾ ಕಂಪನಿಗೆ ಮಾರುತ್ತೇವೆ. 200ರೂ/ಕೆಜಿಗೆ ಖರೀದಿ ಮಾಡಿದ ಕಾಫಿಯನ್ನು ಟಾಟಾ ಕಂಪನಿಗೆ 230ರೂ/ಕೆಜಿ ದರದಲ್ಲಿ ಮಾರಾಟ ಮಾಡುವ ಉದ್ದೇಶ ಇದೆ. ಇದು ಮುಂದಿನ ಋತುವಿನಲ್ಲಿ ಮುಂದುವರೆಯಲಿದೆ. ಇಲ್ಲಿವರೆಗೂ 150-160 ರೂ/ಕೆಜಿಗೆ ಕಾಫಿಯನ್ನು ರೈತರು ಖಾಸಗಿ ಪಾರ್ಟಿಗಳಿಗೆ ಮಾರುತ್ತಿದ್ದರು. ಇದೀಗ ನಾವು 200 ರೂ/ಕೆಜಿ ದರದಲ್ಲಿ ಖರೀದಿ ಮಾಡುತ್ತಿದ್ದೇವೆ” ಎಂದು ಕೊರಾಪಟ್ ಕಾಫಿ ಉತ್ಪಾದಕರ ಸಮಿತಿಯ ಉದ್ಯೋಗಿ ತಪನ್ ಮೊಹಪಾತ್ರಾ ತಿಳಿಸಿದ್ದಾರೆ.