alex Certify BIG NEWS: ಕೊನೆಗೂ ಪಾರ್ಲಿಮೆಂಟ್ ನಲ್ಲಿ ಪೆಗಾಸಸ್ ಬಗ್ಗೆ ಮೌನ ಮುರಿದ ಮೋದಿ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊನೆಗೂ ಪಾರ್ಲಿಮೆಂಟ್ ನಲ್ಲಿ ಪೆಗಾಸಸ್ ಬಗ್ಗೆ ಮೌನ ಮುರಿದ ಮೋದಿ ಸರ್ಕಾರ

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾದ 20 ದಿನದ ನಂತರ ಪೆಗಾಸಸ್ ಸ್ಪೈವೇರ್ ವಿವಾದದ ಮಧ್ಯೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊನೆಗೂ ಮೌನ ಮುರಿದಿದ್ದು, ಸ್ಪಷ್ಟನೆ ನೀಡಲಾಗಿದೆ.

ಇಸ್ರೇಲಿ ಸ್ಪೈವೇರ್ ಮಾರಾಟ ಮಾಡುವ ಎನ್.ಎಸ್.ಒ. ಗ್ರೂಪ್ ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಸೋಮವಾರ ಸ್ಪಷ್ಟವಾಗಿ ಹೇಳಿದೆ.

NSO ಗ್ರೂಪ್ ದಾಳಿ ಸಾಫ್ಟ್‌ ವೇರ್ ಕಂಪನಿ ತಂತ್ರಾಂಶ ಬಳಸಿ ಫೋನ್ ಕದ್ದಾಲಿಕೆ ಮಾಡಲಾಗಿದೆ. ಪೆಗಾಸಸ್ ಮೇಲ್ವಿಚಾರಣೆಯ ಸಾಫ್ಟ್‌ ವೇರ್ ಬಳಸಿ ಭಾರತ ಸೇರಿದಂತೆ ಹಲವಾರು ದೇಶಗಳ ಜನರ ಫೋನ್‌ ಗಳ ಕಣ್ಗಾವಲುಗಾಗಿ ಬಳಸಲಾಗಿದೆ ಎಂಬ ಆರೋಪವಿದೆ.

ರಕ್ಷಣಾ ಸಚಿವಾಲಯವು ಎನ್‌ಎಸ್‌ಒ ಗ್ರೂಪ್ ಟೆಕ್ನಾಲಜೀಸ್‌ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ರಾಜ್ಯ ರಕ್ಷಣಾ ಸಚಿವ ಅಜಯ್ ಭಟ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸರ್ಕಾರವು NSO ಗ್ರೂಪ್ ಟೆಕ್ನಾಲಜೀಸ್‌ನೊಂದಿಗೆ ಯಾವುದೇ ವಹಿವಾಟು ನಡೆಸಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಜುಲೈ 19 ರಂದು ಸಂಸತ್ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ. ಸ್ಪಷ್ಟನೆಗೆ ಒತ್ತಾಯಿಸಿವೆ.

ಐಟಿ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು, ಪೆಗಾಸಸ್ ಸಾಫ್ಟ್‌ ವೇರ್ ಅನ್ನು ಬಳಸುತ್ತಿರುವ ಮಾಧ್ಯಮಗಳ ವರದಿಗಳನ್ನು ತಿರಸ್ಕರಿಸಿದ್ದರು. ಲೋಕಸಭೆಯಲ್ಲಿ ವೈಷ್ಣವ್ ಅವರು, ಅನಧಿಕೃತ ವ್ಯಕ್ತಿಗಳಿಂದ ಯಾವುದೇ ರೀತಿಯ ಅಕ್ರಮ ಕಣ್ಗಾವಲು ಭಾರತದಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದರು.

ಎನ್ಎಸ್ಒ ಗ್ರೂಪ್ ನಿಂದ ಮಿಲಿಟರಿ ದರ್ಜೆಯ ಮಾಲ್ ವೇರ್ ಅನ್ನು ರಾಜಕಾರಣಿಗಳು, ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಇತರರ ಮೇಲೆ ಕಣ್ಣಿಡಲು ಬಳಸಲಾಗುತ್ತಿತ್ತು ಎಂಬುದಕ್ಕೆ ಸಾಕ್ಷ್ಯವನ್ನು ಬಹಿರಂಗಪಡಿಸಿದ ಜಾಗತಿಕ ಮಾಧ್ಯಮ ಒಕ್ಕೂಟದ ತನಿಖೆಯ ನಂತರ ವಿವಾದವು ಭುಗಿಲೆದ್ದಿದೆ.

ರಾಹುಲ್ ಗಾಂಧಿ, ಇಬ್ಬರು ಕೇಂದ್ರ ಸಚಿವರು, ಮಾಜಿ ಸಿಬಿಐ ಮುಖ್ಯಸ್ಥ, ಉದ್ಯಮಿ ಅನಿಲ್ ಅಂಬಾನಿ ಮತ್ತು ಕನಿಷ್ಠ 40 ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಎನ್‌ಎಸ್‌ಒನ ಸೋರಿಕೆಯಾದ ಡೇಟಾಬೇಸ್‌ನಲ್ಲಿ ಇದ್ದರು.

ಆದಾಗ್ಯೂ, ನರೇಂದ್ರ ಮೋದಿ ಸರ್ಕಾರ ಮತ್ತು ಇಸ್ರೇಲಿ NSO ಗುಂಪು ಎಲ್ಲಾ ರಹಸ್ಯಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿ ವರದಿ ಆಧಾರರಹಿತ ಎಂದು ಹೇಳಿದೆ.

ಏತನ್ಮಧ್ಯೆ, ಇಸ್ರೇಲಿ ಸರ್ಕಾರವು ಇತ್ತೀಚೆಗೆ ರಹಸ್ಯ ತನಿಖೆಯ ಹಿಂದಿನ ಸತ್ಯವನ್ನು ತಿಳಿಯಲು NSO ಗ್ರೂಪ್ ವಿರುದ್ಧ ತನಿಖೆಯನ್ನು ಆರಂಭಿಸಿದೆ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...