ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಕಾರು ಟಾಟಾ ಆಲ್ಟ್ರೋಜ್‌ನ ಹೊಸ ಎಕ್ಸ್ ಇ ಪ್ಲಸ್ ಟ್ರಿಮ್ ಬಿಡುಗಡೆ ಮಾಡಿದೆ. ಹೊಸ ಟ್ರಿಮ್ ಜೊತೆಗೆ, ಕಂಪನಿ ಕಾರಿನ ಎಕ್ಸ್ ಎಂ ಟ್ರಿಮ್ ಸ್ಥಗಿತಗೊಳಿಸಿದೆ. ಕಂಪನಿ, ಟಾಟಾ ಆಲ್ಟ್ರೋಜ್ ಎಕ್ಸ್ ಇ ಪ್ಲಸ್ ರೂಪಾಂತರವನ್ನು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ.
ಜನರ ಗಮನ ಸೆಳೆದಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್..! ಕಂಪನಿಗೆ ಸಿಕ್ಕಿದೆ ಸ್ಪೆಷಲ್ ಆರ್ಡರ್
ಪೆಟ್ರೋಲ್ ಎಂಜಿನ್ ಬೆಲೆ 6.34 ಲಕ್ಷ ರೂಪಾಯಿ. ಡೀಸೆಲ್ ಎಂಜಿನ್ ಬೆಲೆ 7.55 ಲಕ್ಷ ರೂಪಾಯಿ. ಗ್ರಾಹಕರು ಹರ್ಮನ್‌ನ 3.5-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬ್ಲೂಟೂತ್ ಕನೆಕ್ಟಿವಿಟಿ, 4 ಸ್ಪೀಕರ್, ಯುಎಸ್ಬಿ ಪೋರ್ಟ್, ಎಫ್ ಎಂ/ಎಎಂ ರೇಡಿಯೋ ಪಡೆಯಲಿದ್ದಾರೆ. ಇದ್ರಲ್ಲಿ ಯುಎಸ್ಬಿ ಚಾರ್ಜರ್ ಇದೆ. ರಿಮೋಟ್ ಕೀಲೆಸ್ ಎಂಟ್ರಿ, ಫಾಲೋ ಮಿ ಹೋಮ್, ಎಲೆಕ್ಟ್ರಿಕ್ ತಾಪಮಾನ ನಿಯಂತ್ರಣ ಮತ್ತು ಫೈಂಡ್ ಮಿ ಫಂಕ್ಷನ್ ನೀಡಲಾಗಿದೆ.
ಟಾಟಾ ಆಲ್ಟ್ರೋಜ್‌ನ ಎಕ್ಸ್ ಇ ಪ್ಲಸ್ 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಮತ್ತು 1.5ಲೀಟರ್, 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಪೆಟ್ರೋಲ್ ಎಂಜಿನ್ 85ಬಿಎಸ್ಪಿ ಗರಿಷ್ಠ ಶಕ್ತಿ ಮತ್ತು 113ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 85ಬಿಎಚ್ಪಿ ಪವರ್ ಮತ್ತು 113ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.