ಬೇಕಾಗುವ ಸಾಮಾಗ್ರಿಗಳು: ನೇಂದ್ರ ಬಾಳೆಹಣ್ಣು- ½ ಕೆ.ಜಿ, ಬೆಲ್ಲ- ¼ ಕೆ.ಜಿ, ತೆಂಗಿನಕಾಯಿ-1, ಕೊಬ್ಬರಿ-ಸ್ವಲ್ಪ, ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ.
ಮಾಡುವ ವಿಧಾನ: ಮೊದಲಿಗೆ ಚೆನ್ನಾಗಿ ಹಣ್ಣಾಗಿರುವ ನೇಂದ್ರ ಬಾಳೆಹಣ್ಣನ್ನು ತೆಗೆದುಕೊಂಡು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ ತುಪ್ಪ ಮತ್ತು ನೀರು ಹಾಕಿ ಬಾಳೆಹಣ್ಣನ್ನು ಬೇಯಿಸಿ. ಚೆನ್ನಾಗಿ ಬೆಂದ ಮೇಲೆ ತಣಿಯಲು ಇಡಿ. ಒಂದು ಇಡಿ ತೆಂಗಿನಕಾಯಿಯ ಕಾಯಿಹಾಲು ತೆಗೆಯಬೇಕು. ಬಳಿಕ ಬೇಯಿಸಿದ ಬಾಳೆಹಣ್ಣನ್ನು ನುಣ್ಣಗೆ ರುಬ್ಬಿಕೊಳ್ಳಿ.
ಬಳಿಕ ಈ ಪೇಸ್ಟ್ ನ್ನು ಒಂದು ಪಾತ್ರೆಗೆ ಹಾಕಿ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಬೆಲ್ಲ ಎಲ್ಲ ಕರಗಿ ಚೆನ್ನಾಗಿ ಕುದಿ ಬಂದ ಬಳಿಕ ಕಾಯಿಹಾಲು ಹಾಕಿ ಮಿಕ್ಸ್ ಮಾಡಿ ಕುದಿ ಬರುವವರೆಗೆ ಹಾಗೆ ಬಿಡಿ, ಬಳಿಕ ಕುಟ್ಟಿ ಪುಡಿ ಮಾಡಿರುವಂತಹ ಏಲಕ್ಕಿ ಸೇರಿಸಿ. ಬಳಿಕ ಇನ್ನೊಂದು ಪಾತ್ರೆಗೆ ಹೆಚ್ಚಿಟ್ಟ ಸ್ವಲ್ಪ ಕೊಬ್ಬರಿ ತುಂಡನ್ನು ತುಪ್ಪದ ಜೊತೆ ಹುರಿಯಬೇಕು. ಇದು ಕೆಂಪಾದಾಗ ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ನಂತರ ಪಾಯಸಕ್ಕೆ ಮಿಕ್ಸ್ ಮಾಡಿಕೊಂಡರೆ ಸವಿಯಲು ಬಾಳೆಹಣ್ಣಿನ ಪಾಯಸ ರೆಡಿ.