alex Certify ‘ದಿಲ್ ಕಾ ದರಿಯಾ’ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಿಲ್ ಕಾ ದರಿಯಾ’ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೈರಲ್

Viral Video: Tanzanian Kili Paul Lip-Syncs to Kabir Singh's Dil Ka Dariya Song, Desis Love It | Watchತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವುದು ಮತ್ತು ಡ್ಯಾನ್ಸ್ ಮಾಡುವ ಮೂಲಕ ವೈರಲ್ ಸೆನ್ಸೇಷನ್ ಆಗಿದ್ದು, ಇದೀಗ ಮತ್ತೊಂದು ವಿಡಿಯೋದೊಂದಿಗೆ ಹಿಂತಿರುಗಿದ್ದಾರೆ.

ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಅವರು ಕಬೀರ್ ಸಿಂಗ್‌ರ ಜನಪ್ರಿಯ ಬಾಲಿವುಡ್ ಚಲನಚಿತ್ರದ ಹಾಡನ್ನು ಲಿಪ್ ಸಿಂಕ್ ಮಾಡಿದ್ದಾರೆ. ಇದೀಗ ದಿಲ್ ಕಾ ದರಿಯಾ ಹಾಡಿಗೆ ಅವರು ಅದ್ಭುತವಾಗಿ ಲಿಪ್ ಸಿಂಕ್ ಮಾಡಿದ್ದಾರೆ.

ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದ ಹಾಡನ್ನು ಅರ್ಜಿತ್ ಸಿಂಗ್ ಅವರು ಹಾಡಿದ್ದು, ಮಿಥುನ್ ಸಂಗೀತ ಸಂಯೋಜಿಸಿದ್ದಾರೆ. ಇದೀಗ ಈ ಹಾಡಿಗೆ ಲಿಪ್ ಸಿಂಕ್ ಮಾಡಿರುವ ಕಿಲಿ ಪಾಲ್ ವಿಡಿಯೋ ಭಾರಿ ವೈರಲ್ ಆಗಿದ್ದು, 23,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಕಿಲಿ ಪಾಲ್ ಅವರ ಅದ್ಭುತವಾದ ತುಟಿ ಸಿಂಕ್ ಮಾಡುವ ಕೌಶಲ್ಯಕ್ಕಾಗಿ ನೆಟ್ಟಿಗರು ಅವರನ್ನು ಶ್ಲಾಘಿಸಿದ್ದು, ಕಾಮೆಂಟ್‌ಗಳ ವಿಭಾಗವನ್ನು ಹೃದಯದ ಎಮೋಜಿಗಳೊಂದಿಗೆ ತುಂಬಿದ್ದಾರೆ. ಅವರ ಅಭಿನಯ, ಅಭಿವ್ಯಕ್ತಿಗಳು, ಅವರು ಹಾಡಿನಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿರುವ ರೀತಿ ನೆಟ್ಟಿಗರ ಮನಗೆದ್ದಿದೆ. ಭಾರತೀಯರು ಕಿಲಿ ಪಾಲ್ ಅವರನ್ನು ಪ್ರೀತಿಯಿಂದ ಹರಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...