
ಮಳೆ ಹಾಗೂ ಅದರಿಂದಾಗಿ ಭೂಕುಸಿತದ ಸಾಧ್ಯತೆಗಳಿರುವ ಕಾರಣ ನೀಲಗಿರಿ ಶ್ರೇಣಿ ಮೂಲಕ ಹಾದು ಹೋಗುವ ಪಾರಂಪರಿಕ ರೈಲ್ವೇ ಸೇವೆ (ಎನ್ಎಂಆರ್) ಡಿಸೆಂಬರ್ 14ರವರೆಗೂ ಸ್ಥಗಿತಗೊಳಿಸಲಾಗಿದೆ.
ಮೆಟ್ಟುಪಾಳ್ಯಂನಿಂದ ಉದಕಮಂಡಲದವರೆಗೂ ಈ ರೈಲು ಸೇವೆ ಲಭ್ಯವಿದೆ. ಕಳೆದ ಕೆಲ ದಿನಗಳಿಂದ ಕೊಯಮತ್ತೂರು ಹಾಗೂ ನೀಲಗಿರಿ ಜಿಲ್ಲೆಗಳು ಭಾರೀ ಮಳೆ ಕಾಣುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಭೋಜನ ವಿರಾಮದೊಳಗೆ ಭಾರತಕ್ಕೆ ವಿಜಯಲಕ್ಷ್ಮಿ ಖಚಿತ: ಕೊಹ್ಲಿ ಪಡೆ ಗೆಲುವಿಗೆ ಐದೇ ಮೆಟ್ಟಿಲು
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ನೀಲಗಿರಿ ಪರ್ವತ ರೈಲ್ವೇ (ಎನ್ಎಂಆರ್) ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಮೆಟ್ಟುಪಾಳ್ಯಂ, ಕೂನೂರು ಮೂಲಕ ಅಲ್ಲಿಂದ 15 ಕಿಮೀ ದೂರವಿರುವ ಊಟಿವರೆಗೂ ಈ ಸುಂದರವಾದ ರೈಲಿನಲ್ಲಿ ಬೆಟ್ಟಗಳು ಹಾಗೂ ಸುತ್ತಲಿನ ಕಣಿವೆಗಳನ್ನು ಕಣ್ತುಂಬಿಕೊಂಡು ಸಾಗಬಹುದಾಗಿದೆ.