ತಹಶೀಲ್ದಾರ್ ಕಚೇರಿಯ ಎದುರು ನಿಲ್ಲಿಸಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆಯು ತಮಿಳುನಾಡಿನ ಕಂದಾಚಿಪುರಂನಲ್ಲಿ ಭಾನುವಾರ ನಡೆದಿದೆ.
ತಹಶೀಲ್ದಾರ್ ಬಳಕೆ ಮಾಡುತ್ತಿದ್ದ ಬೊಲೆರೋ ಎಸ್ಯುವಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗಾಗಲೇ ಕಾರು ಸಂಪೂರ್ಣ ಸುಟ್ಟ ಕರಕಲಾಗಿತ್ತು ಎನ್ನಲಾಗಿದೆ.
ಈ ಸಂಬಂಧ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಕಾರಿನ ಸುತ್ತಮುತ್ತಲೂ ಕೈಯಲ್ಲಿ ಸುತ್ತಿಗೆ ಹಾಗೂ ಪೇಂಟ್ ತಿನ್ನರ್ ಹಿಡಿದು ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ವಾಹನದ ಕಿಟಕಿಯ ಗಾಜನ್ನು ಒಡೆದ ಆ ವ್ಯಕ್ತಿಯು, ಥಿನ್ನರ್ನ್ನು ಕಾರಿನ ಒಳಗಡೆ ಸಿಂಪಡಿಸಿ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪದವೀಧರರಿಗೆ ಗುಡ್ ನ್ಯೂಸ್: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ SBI ಅರ್ಜಿ
ತನಿಖೆ ವೇಳೆ ಆರೋಪಿಯು ತಹಶೀಲ್ದಾರ್ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ್ದಾನೆ. ತಹಶೀಲ್ದಾರ್ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪ್ರತಿ ಕೆಲಸಕ್ಕೂ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿದ್ದಾನೆ.
ಇದು ಮಾತ್ರವಲ್ಲದೇ ಪ್ರತಿಭಟನೆ ರೂಪವಾಗಿ ವ್ಯಕ್ತಿ ಕಚೇರಿಯ 20 ಕಿಟಕಿಗಳನ್ನು ಒಡೆದು ಹಾಕಿರೋದಾಗಿಯೂ ಹೇಳಿದ್ದಾನೆ. ಪೊಲೀಸರು ಈ ವ್ಯಕ್ತಿ ಮಾನಸಿಕ ಅಸ್ವಸ್ಥನಿರಬಹುದು ಎಂಧು ಅಂದಾಜಿಸಿದ್ದಾರೆ. ಈ ಸಂಬಂಧ ವೈದ್ಯಕೀಯ ಪರೀಕ್ಷೆಗೂ ಮುಂದಾಗಿದ್ದಾರೆ.