18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕೆಂದರೆ ಕೋವಿಡ್ ಲಸಿಕೆ ಪಡೆದಿರಬೇಕೆಂದು ತಮಿಳುನಾಡಿನ ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ.
ಶಿಕ್ಷಣ ತಜ್ಞರ ಉನ್ನತ ಸಮಿತಿಯೊಂದರ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡು ಆರೋಗ್ಯ ಸಚಿವ ಎಂಎ ಸುಬ್ರಹ್ಮಣಿಯನ್, “18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕನಿಷ್ಠ ಒಂದು ಚುಚ್ಚುಮದ್ದನ್ನಾದರೂ ಪಡೆದುಕೊಂಡಿದ್ದಲ್ಲಿ ಮಾತ್ರವೇ ಕಾಲೇಜುಗಳಿಗೆ ಬರಲು ಅನುಮತಿ ನೀಡಲಾಗುವುದು. ಈ ವಯಸ್ಸಿನ ಮೇಲ್ಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ 46%ರಷ್ಟು ಮಂದಿ ಮಾತ್ರವೇ ಕನಿಷ್ಠ ಒಂದಾದರೂ ಚುಚ್ಚುಮದ್ದು ಪಡೆದುಕೊಂಡಿದ್ದು, 12%ರಷ್ಟು ಮಂದಿ ಮಾತ್ರವೇ ಎರಡೂ ಚುಚ್ಚುಮದ್ದು ಪಡೆದಿದ್ದಾರೆ. ವಿದ್ಯಾರ್ಥಿಗಳು ಎರಡೂ ಚುಚ್ಚುಮದ್ದುಗಳನ್ನು ಪಡೆದಿದ್ದಾರೆ ಎಂದು 100% ಖಾತ್ರಿಪಡಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳ ಆಡಳಿತಗಳು ಮಾಡಬೇಕಿದೆ,” ಎಂದಿದ್ದಾರೆ.
ಅಧ್ಯಯನದಲ್ಲಿ ಬಯಲಾಯ್ತು ಥೈರಾಯ್ಡ್ ಸಮಸ್ಯೆ ಕುರಿತಾದ ಬೆಚ್ಚಿ ಬೀಳಿಸುವ ಅಂಶ
ಶಾಲಾ – ಕಾಲೇಜುಗಳು ಕ್ಯಾಂಟೀನ್ ಹಾಗೂ ಊಟ ಮಾಡುವ ಜಾಗಗಳಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆಗಳು ಇರುವ ವರದಿಗಳ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯ ಅನುಮತಿ ಇಲ್ಲದೇ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದಿದ್ದಾರೆ ಸಚಿವರು.