alex Certify ರಾಜೀವ್‌ ಹಂತಕಿಗೆ ಪೆರೋಲ್: ಅರ್ಜಿ ಪರಿಗಣಿಸಿರುವುದಾಗಿ ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜೀವ್‌ ಹಂತಕಿಗೆ ಪೆರೋಲ್: ಅರ್ಜಿ ಪರಿಗಣಿಸಿರುವುದಾಗಿ ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರದ ಮಾಹಿತಿ

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಮಂದಿಯಲ್ಲಿ ಒಬ್ಬರಾದ ನಳಿನಿ ಶ್ರೀಹರನ್‌ಗೆ ಪೆರೋಲ್ ನೀಡಲು ತಮಿಳುನಾಡು ಸರ್ಕಾರ ಪರಿಗಣಿಸುತ್ತಿರುವುದಾಗಿ ಮದ್ರಾಸ್ ಹೈಕೋರ್ಟ್‌ಗೆ ವಿಚಾರ ತಿಳಿಸಿದೆ.

ರಾಜ್ಯದ ಸಾರ್ವಜನಿಕ ಪ್ರಾಸಿಕ್ಯೂಟರ್‌ ಮೊಹಮ್ಮದ್ ಹಸನ್ ಜಿನ್ನಾ ಅವರು ನ್ಯಾಯಾಧೀಶರಾದ ಪಿಎನ್ ಪ್ರಕಾಶ್ ಮತ್ತು ಆರ್‌ ಹೇಮಲತಾ ಅವರಿದ್ದ ವಿಭಾಗೀಯ ಪೀಠಕ್ಕೆ ಈ ವಿಚಾರ ತಿಳಿಸಿದ್ದಾರೆ. ನಳಿನಿಯ ತಾಯಿ ಪದ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಆಲಿಕೆಯನ್ನು ಪೀಠ ಇಂದು ಕೈಗೆತ್ತಿಕೊಂಡಿತ್ತು.

ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಸಂದರ್ಭದಲ್ಲಿ ತನ್ನ ಮಗಳು ಜೊತೆಯಾಗಿ ಇರಲಿ ಎಂದು ಆಶಿಸುತ್ತಿರುವುದಾಗಿ ಪದ್ಮ ಹೇಳಿಕೊಂಡಿದ್ದಾರೆ. ತನ್ನ ಮಗಳಿಗೆ ಒಂದು ತಿಂಗಳ ಮಟ್ಟಿಗೆ ಪೆರೋಲ್ ಕೊಡಲು ಕೋರಿ ರಾಜ್ಯ ಸರ್ಕಾರಕ್ಕೆ ಪದ್ಮ ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಒಲೆ ಹಚ್ಚದೇ ಅವಲಕ್ಕಿ ತಯಾರಿಸಿದ್ರಾ ಕಮೀಷನರ್..?

ಅರ್ಜಿಯು ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿದ್ದು, ಕೋರ್ಟ್‌ನ ಗಮನಕ್ಕೆ ತರಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಜಿನ್ನಾ ಇದೇ ವೇಳೆ ವಿನಂತಿಸಿಕೊಂಡಿದ್ದಾರೆ. ಪ್ರಕರಣದ ಆಲಿಕೆಯನ್ನು ಡಿಸೆಂಬರ್‌ 23ಕ್ಕೆ ಮುಂದೂಡಿರುವ ಕೋರ್ಟ್, ಮೂರು ದಿನಗಳ ಮಟ್ಟಿಗೆ ಕಾಲಾವಕಾಶ ಕೊಟ್ಟಿದೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿರನ್ನು ಮೇ 21, 1991ರಲ್ಲಿ ಶ್ರೀಪೆರಂಬುದೂರಿನಲ್ಲಿ ಎಲ್‌ಟಿಟಿಇನ ಆತ್ಮಹತ್ಯಾ ಬಾಂಬರ್‌ ಒಬ್ಬಳು ಕೊಂದಿದ್ದಳು. ಈ ಹತ್ಯೆಯ ಸಂಬಂಧ ಏಳು ಮಂದಿ ತಮ್ಮ ಜೀವಿತವನ್ನು ಜೈಲಿನಲ್ಲೇ ಕಳೆಯುವ ಶಿಕ್ಷೆಗೆ ಗುರಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...