alex Certify ಮಹಿಳೆ ಮೈಯಿಂದ ಮೀನಿನ ವಾಸನೆ ಬರುತ್ತಿದೆ ಎಂದು ಬಸ್ಸಿಂದ ಕೆಳಗಿಳಿಸಿದ ನಿರ್ವಾಹಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಮೈಯಿಂದ ಮೀನಿನ ವಾಸನೆ ಬರುತ್ತಿದೆ ಎಂದು ಬಸ್ಸಿಂದ ಕೆಳಗಿಳಿಸಿದ ನಿರ್ವಾಹಕ…!

ವೃದ್ಧೆಯ ಬಳಿ ಮೀನಿನ ವಾಸನೆ ಬರುತ್ತಿದೆ ಎಂದು ಆರೋಪಿಸಿದ ಕಂಡಕ್ಟರ್​ ಆಕೆಯನ್ನು ನಿರ್ದಾಕ್ಷಿಣ್ಯವಾಗಿ ಬಸ್​​ನಿಂದ ಕೆಳಗಿಳಿಸಿದ ಅಮಾನವೀಯ ಘಟನೆಯು ತಮಿಳು ನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಕಂಡಕ್ಟರ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಕೂಡ ಮೀನುಗಾರ ಮಹಿಳೆಯನ್ನು ಮಾರ್ಗ ಮಧ್ಯದಲ್ಲಿ ಇಳಿಸಿದ ಕಂಡಕ್ಟರ್​ ಕ್ರಮದ ಬಗ್ಗೆ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೃದ್ಧೆಯ ಬಳಿ ವಿಪರೀತ ಮೀನಿನ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೋಪಗೊಂಡ ಕಂಡಕ್ಟರ್​ ಬಸ್​ನಿಂದ ಇಳಿಯುವಂತೆ ವೃದ್ಧೆಗೆ ತಾಕೀತು ಮಾಡಿದ್ದ ಎನ್ನಲಾಗಿದೆ.

ವೃದ್ಧೆಯು ತನಗಾದ ಅವಮಾನದ ಬಗ್ಗೆ ವಿವರಿಸುತ್ತಾ ನ್ಯಾಯಕ್ಕೆ ಆಗ್ರಹಿಸುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈ ವಿಡಿಯೋ ಗಮನಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಕಂಡಕ್ಟರ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆಯಷ್ಟೇ ಮೀನುಗಾರ ಮಹಿಳೆ ಬಸ್​ ಕಂಡಕ್ಟರ್​ ಬಸ್​ನಲ್ಲಿ ತನಗೆ ಮಾಡಿದ ಅವಮಾನ ಹಾಗೂ ಬಸ್​ನಿಂದ ಇಳಿಯುವಂತೆ ದರ್ಪ ತೋರಿದ ಬಗ್ಗೆ ವಿವರಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಸಾಮಾಜಿಕ ಕಾರ್ಯಕರ್ತರು ಕಂಡಕ್ಟರ್​ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಘಟನೆಯ ಗಂಭೀರತೆಯನ್ನು ಅರಿತ ಕೊಲಾಚೆಲ್​ ಸಾರಿಗೆ ನಿಗಮವು ಬಸ್​ನ ಕಂಡಕ್ಟರ್​ ಹಾಗೂ ಚಾಲಕನನ್ನು ಅಮಾನತುಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...