alex Certify ಅಂಗಡಿಯವನಿಗೆ ಪೊಲೀಸ್‌ ಪೇದೆ ಆವಾಜ್..! ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಡಿಯವನಿಗೆ ಪೊಲೀಸ್‌ ಪೇದೆ ಆವಾಜ್..! ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಅಂಗಡಿ ಮಾಲೀಕನಿಗೆ ಪೊಲೀಸ್​ ಬೆದರಿಕೆ ಹಾಕಿದ ವಿಡಿಯೋ ವೈರಲ್​ ಆದ ಪರಿಣಾಮ ಪೊಲೀಸ್​​ ಪೇದೆಯನ್ನು ಸಶಸ್ತ್ರ ಮೀಸಲು ಘಟಕಕ್ಕೆ ವರ್ಗಾವಣೆ ನಡೆಸಿದ ಘಟನೆಯು ತಮಿಳುನಾಡಿನ ತಿರುಪುರದಲ್ಲಿ ನಡೆದಿದೆ.‌

ತಿರುಪುರದಲ್ಲಿರುವ ಅಂಗಡಿ ಮಾಲೀಕನಿಗೆ ಅಲೆಕ್ಸಾಂಡರ್​ ಎಂಬ ಪೊಲೀಸ್​ ಬೆದರಿಕೆಯೊಡ್ಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಪೊಲೀಸ್​ ಅಲೆಕ್ಸಾಂಡರ್​ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ.

ಮುತ್ತನಂಪಾಳ್ಯ ಪ್ರದೇಶದಲ್ಲಿ ಜಾಫರ್​ ಎಂಬ ಹೆಸರಿನ ವ್ಯಕ್ತಿಯು ಅಂಗಡಿಯನ್ನು ನಡೆಸುತ್ತಿದ್ದ. ಈತನಿಗೆ ಕಿರುಕುಳ ನೀಡಿದ ಆರೋಪವು ಅಲೆಕ್ಸಾಂಡರ್​ ಮೇಲೆ ಎದುರಾಗಿದೆ. ಜಾಫರ್​ ಅವಿನಾಶಿ ರಸ್ತೆಯಲ್ಲಿ ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದಾರೆ.

ಬೈಕ್​ ಪಾರ್ಕಿಂಗ್​​ಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಜಾಫರ್ ತನ್ನ ಅಂಗಡಿಯ ಜಾಗವನ್ನು ತೆಗೆದುಕೊಂಡ ಮತ್ತೊಬ್ಬ ಅಂಗಡಿಯ ಮಾಲೀಕನ ಜೊತೆ ಜಗಳವಾಡಿದ್ದರು. ಇದೇ ವೇಳೆ ವೀರಂಪಾಡಿ ಪೊಲೀಸ್​ ಠಾಣೆ ಪೇದೆ ಅಲೆಕ್ಸಾಂಡರ್​ ಮಧ್ಯಪ್ರವೇಶಿಸಿ ಜಾಫರ್​ಗೆ ಬೆದರಿಕೆ ಹಾಕಿದ್ದಾರೆ.

ಜಾಫರ್,​ ಪೊಲೀಸ್​ ಪೇದೆ ಬೆದರಿಕೆ ಹಾಕುತ್ತಿರುವ ವಿಡಿಯೋವನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ, ಆದರೆ ಇದಕ್ಕೆ ಅಲೆಕ್ಸಾಂಡರ್​ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಜಾಫರ್ ಅಂಗಡಿಯಲ್ಲಿ ಹಾಕಿದ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ಜಾಫರ್ ಅಂಗಡಿಗೆ ನುಗ್ಗಿದ ಅಲೆಕ್ಸಾಂಡರ್​ ನೀನು ಇಲ್ಲಿ ಹೇಗೆ ಅಂಗಡಿ ನಡೆಸುತ್ತೀಯಾ ಎಂದು ನಾನೂ ನೋಡುತ್ತೇನೆ. ನಿನ್ನ ಅಂಗಡಿಗೆ ಒಂದೇ ಒಂದು ಗ್ರಾಹಕನು ಸುಳಿಯೋದಿಲ್ಲ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...