alex Certify ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ಬಿಡುಗಡೆಗೆ ಸೂಚನೆ ನೀಡಿದ್ರಾ ಪಕ್ಷದ ಅಧ್ಯಕ್ಷ ಅಣ್ಣಾಮಲೈ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ಬಿಡುಗಡೆಗೆ ಸೂಚನೆ ನೀಡಿದ್ರಾ ಪಕ್ಷದ ಅಧ್ಯಕ್ಷ ಅಣ್ಣಾಮಲೈ…?

ಚೆನ್ನೈ: ಕರ್ನಾಟಕ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಪಕ್ಷದ ಮುಖ್ಯಸ್ಥರಾದ ನಂತರದಲ್ಲಿ ಅಣ್ಣಾಮಲೈ ಮತ್ತು ಪಕ್ಷದ ಮುಖಂಡರ ನಡುವೆ ಘರ್ಷಣೆ ಶುರುವಾದಂತಿದೆ. ಬಿಜೆಪಿ ಹಿರಿಯ ನಾಯಕ ಕೆ.ಟಿ. ರಾಘವನ್ ಅವರ ರಾಸಲೀಲೆ ವಿಡಿಯೋ ಬಿಡುಗಡೆ ಮಾಡುವಂತೆ ಅಣ್ಣಾಮಲೈ ಸೂಚನೆ ನೀಡಿದ್ದರು ಎನ್ನಲಾದ ಆಡಿಯೋ ಹರಿದಾಡತೊಡಗಿದೆ.

ರಾಘವನ್ ಅವರ ಅಶ್ಲೀಲ ವೀಡಿಯೋ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಪಕ್ಷದಿಂದ ಹೊರಹಾಕುತ್ತೇನೆ. ವಿಡಿಯೋ ರಿಲೀಸ್ ಮಾಡದಿದ್ದರೆ ನನಗೆ ನೋವಾಗುತ್ತದೆ ಎಂದು ಅಣ್ಣಾಮಲೈ ಹೇಳಿದ್ದರೆನ್ನಲಾದ ಆಡಿಯೋ ವೈರಲ್ ಆಗಿದ್ದು, ತಮಿಳುನಾಡು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...