alex Certify ಕಣ್ಣಿನಲ್ಲಿ ತ್ರಿವರ್ಣ ಧ್ವಜದ ಚಿತ್ರ; ಸ್ವಾತಂತ್ರೋತ್ಸವದ ‘ಅಮೃತ ಮಹೋತ್ಸವ’ ದ ಸಂದರ್ಭದಲ್ಲಿ ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ಸಾಮಾಜಿಕ ಕಾರ್ಯಕರ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನಲ್ಲಿ ತ್ರಿವರ್ಣ ಧ್ವಜದ ಚಿತ್ರ; ಸ್ವಾತಂತ್ರೋತ್ಸವದ ‘ಅಮೃತ ಮಹೋತ್ಸವ’ ದ ಸಂದರ್ಭದಲ್ಲಿ ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ಸಾಮಾಜಿಕ ಕಾರ್ಯಕರ್ತ

ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ, ‘ಹರ್ ಘರ್ ತಿರಂಗಾ’ ಅಭಿಯಾನ ಭರ್ಜರಿಯಾಗಿ ನಡೆದಿದೆ. ದೇಶಕ್ಕಾಗಿ ತಮ್ಮ ಹೃದಯದಲ್ಲಿ ಇರುವ ಪ್ರೀತಿ-ಭಕ್ತಿಯನ್ನ ಜನರು ತಮ್ಮ ತಮ್ಮದೇ ಆದ ರೀತಿಯಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ.

ಆದರೆ ಇಲ್ಲೊಬ್ಬ ತಮಿಳುನಾಡಿನ ವ್ಯಕ್ತಿ ಇದ್ದಾನೆ ನೋಡಿ, ದೇಶದ ಪ್ರತೀಕ ಆತನ ಹೃದಯಲ್ಲಿರುವ ಪ್ರೀತಿ ಎಂಥಹದ್ದು ಅಂತ ತೋರಿಸುವುದಕ್ಕೆ ತನ್ನ ಬಲ ಕಣ್ಣಿನ ಐರಿಸ್ ಬಳಿ ತ್ರಿವರ್ಣ ಧ್ವಜದ ಚಿತ್ರವನ್ನ ಬಿಡಿಸಿಕೊಂಡಿದ್ದಾನೆ.

ಕಣ್ಣಿನ ಗುಡ್ಡೆಯ ಮೇಲೆ ಚಿತ್ರ ಬಿಡಿಸಿಕೊಳ್ಳುವುದು ಅಂದರೆ ಸಾಮಾನ್ಯಾನಾ? ಆದರೂ ಆತ ಆ ಸಾಹಸಕ್ಕೆ ಮುಂದಾಗಿದ್ದ. ಇನ್ನೂ ಆ ಚಿತ್ರ ಬಿಡಿಸಿಕೊಂಡಿದ್ದು ಹೇಗೆ ಅಂತ ಗೊತ್ತಾದ್ರೆ ನೀವು ಇನ್ನೂ ಶಾಕ್ ಆಗ್ತಿರಾ? ಅಸಲಿಗೆ ಕೋಯಂಬತ್ತೂರ್ ಜಲಿಯ ಬಳಿ ಇರುವ ಕುನಯಿಮುಥೂರ್ ಎಂಬಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸುವ ಈ ವ್ಯಕ್ತಿಯ ಹೆಸರು ರಾಜಾ ಎಂದು ಹೇಳಲಾಗುತ್ತಿದೆ. ಈತ ಚಿತ್ರ ಕಲಾವಿದ ಕೂಡ. ಹೀಗೆ ಕಣ್ಣಿನಲ್ಲಿ ಚಿತ್ರ ಬಿಡಿಸಿಕೊಳ್ಳುವುದಕ್ಕೆ ಇನ್ನೊರ್ವ ಚಿತ್ರಕಲಾವಿದ ಸಹಾಯ ಪಡೆದುಕೊಂಡಿದ್ದಾನೆ.

ಆ ಕಲಾವಿದ ಮೊದಲು ಮೊಟ್ಟೆಯ ಒಳಭಾಗದಲ್ಲಿ ಅಂದರೆ, ಚಿಪ್ಪಿನ ಕೆಳಗೆ ತೆಳುವಾದ ಬಿಳಿಯ ಹಾಳೆಯಂತಿರುವ ಆ ಪದರಿಗೆ, ತ್ರಿವರ್ಣದ ಬಣ್ಣವನ್ನ ಹಚ್ಚಿದ್ದಾನೆ. ಆ ನಂತರ ಅದನ್ನು ಈ ವ್ಯಕ್ತಿಯ ಕಣ್ಣಿನೊಳಗೆ ಅಂಟಿಸಲಾಗಿದೆ.

ಕಣ್ಣಿನ ಭಾಗ ಮೊದಲೇ ಸೂಕ್ಷ್ಮ ಆದ್ದರಿಂದ ಕಣ್ಣಿಗೆ ಯಾವುದೇ ಹಾನಿಯಾಗದಂತೆ ಈ ಪೇಂಟಿಂಗ್ ಅಂಟಿಸಲು 1-2 ಗಂಟೆ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಇಂತಹ ಪ್ರಯತ್ನ ಮನೆಯಲ್ಲಿ ಮಾಡಿದರೆ ಅಪಾಯ ಗ್ಯಾರಂಟಿ. ಜೊತೆಗೆ ಕಣ್ಣಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ಎದುರಾಗಬಹುದು. ಅನ್ನೋದನ್ನ ಕೂಡಾ ಆತ ತನ್ನ ವಿಡಿಯೋದದಲ್ಲಿ ಹೇಳಿದ್ದಾನೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...