ಚೆನ್ನೈ: 100 ರೂ. ಗಡಿ ದಾಟಿ ದಾಖಲೆ ಬೆಲೆಯಲ್ಲಿ ದೇಶಾದ್ಯಂತ ಮಾರಾಟವಾಗುತ್ತಿರುವ ಪೆಟ್ರೋಲ್ ಬಗ್ಗೆ ನೆನೆಸಿಕೊಂಡರೆ ಬಹುಶಃ ವಾಹನ ಚಾಲಕರು ತಡರಾತ್ರಿಯಲ್ಲೂ ನಿದ್ರೆ ಬದಿಗೊತ್ತಿ ಅಸಮಾಧಾನದಿಂದ ಎದ್ದು ಕೂರುತ್ತಿದ್ದಾರೆ. ಅಷ್ಟು ದುಬಾರಿ ಆಗಿ ಹೋಗಿದೆ. ಕೇಂದ್ರ ಸರ್ಕಾರ ದಿನೇದಿನೆ ಪೆಟ್ರೋಲ್ ಬೆಲೆ ಏರುತ್ತಿದ್ದರೂ, ತೆರಿಗೆ ಇಳಿಸದೆಯೇ ಜನಸಾಮಾನ್ಯರ ಮೇಲೆ ಭಾರ ಹಾಕುತ್ತಿದೆ.
ಇಂಥ ಸಂದರ್ಭದಲ್ಲಿ ಸರ್ಕಾರಕ್ಕೆ ಖಡಕ್ ಸಂದೇಶವನ್ನು ತಮಿಳಿನ ಖ್ಯಾತ ಹಾಸ್ಯ ನಟ ಮಯಿಲ್‍ಸ್ವಾಮಿ ರವಾನಿಸಿದ್ದಾರೆ. ಪ್ರತಿಭಟನೆ ಮಾಡದೆಯೇ, ಕೂಗಾಡದೆಯೇ, ಸುಮ್ಮನೆ ಎರಡು ಕ್ಯಾನ್‍ಗಳಲ್ಲಿ 5 ಲೀಟರ್ ಪೆಟ್ರೋಲ್ ತುಂಬಿಸಿಕೊಂಡು ಹೋಗಿ ಸೀದಾ ಮದುವೆಯ ಮಂಟಪಕ್ಕೆ ನುಗಿದ್ದಾರೆ. ನವ ವಧು-ವರರಿಗೆ ಅದನ್ನು ಕೊಟ್ಟು, ಸದ್ಯಕ್ಕೆ ಹೊರಗೆ ಸುತ್ತಲು ಇದೇ ಅವಶ್ಯಕ. ಹುಷಾರಾಗಿ ಇರಿಸಿಕೊಳ್ಳಿ ಎಂದಿದ್ದಾರೆ.
‘ಡಮ್ ಡುಮಾ ದಮ್’ ಹಾಡಿಗೆ ಕುಣಿದು ಕುಪ್ಪಳಿಸಿದ ರಿಕಿ ಪಾಂಡ್
ಈ ಫೋಟೊ, ಖಡಕ್ ಸಂದೇಶದ ಮೂಲಕ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಕೇಂದ್ರ ಸರ್ಕಾರಕ್ಕೆ ನೆಟ್ಟಿಗರು ಚಾಟಿ ಬೀಸುತ್ತಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಜನರ ಸಂಕಷ್ಟ ಅರಿತು ಇತ್ತೀಚೆಗೆ ಪೆಟ್ರೋಲ್ ಬೆಲೆಯನ್ನು ಲೀಟರ್‍ಗೆ 3 ರೂ.ನಂತೆ ಕಡಿತಗೊಳಿಸಿದ್ದಾರೆ.