alex Certify ‘ಕಾವಾಲಯ್ಯ’ ಹಾಡಿನಲ್ಲಿ ತಮನ್ನಾ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ : ವಿವಾದದ ಕಿಡಿ ಹೊತ್ತಿಸಿದ ಹೆಸರಾಂತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾವಾಲಯ್ಯ’ ಹಾಡಿನಲ್ಲಿ ತಮನ್ನಾ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ : ವಿವಾದದ ಕಿಡಿ ಹೊತ್ತಿಸಿದ ಹೆಸರಾಂತ ನಟ

ಜೈಲರ್ ಚಿತ್ರದ ತಮನ್ನಾ ಭಾಟಿಯಾ ಅವರ ‘ಕಾವಾಲಯ್ಯ ‘ ಹಾಡು ಬಿಡುಗಡೆಯಾದ ಕೂಡಲೇ ಭಾರಿ ಜನ ಜನಪ್ರಿಯತೆಗಳಿಸಿತ್ತು. ತಮನ್ನಾ ಡ್ಯಾನ್ಸ್ , ಹಾಡಿನ ಮ್ಯೂಸಿಕ್ ಜನರನ್ನು ಆಕರ್ಷಿಸಿತು. ತಮನ್ನಾ ಅವರ ಅಭಿಮಾನಿಗಳು ಟ್ರ್ಯಾಕ್ ನ ಹೆಜ್ಜೆಗಳನ್ನು ಮರುಸೃಷ್ಟಿಸಿದರು. ಆದರೆ, ಲಿಯೋ ನಟ ಮನ್ಸೂರ್ ಅಲಿ ಖಾನ್ ಈ ಹಾಡಿನ ಬಗ್ಗೆ ಟೀಕಿಸಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

‘ಕಾವಾಲಯ್ಯ’ ಹಾಡಿನಲ್ಲಿ ತಮನ್ನಾ ಕೊಳಕಾಗಿ,  ಅಶ್ಲೀಲವಾಗಿ  ಹೆಜ್ಜೆ ಹಾಕಿದ್ದಾರೆ ಎಂದು ನಟ ಮನ್ಸೂರ್ ಅಲಿ ಖಾನ್ ವಿವಾದದ ಕಿಡಿ ಹೊತ್ತಿಸಿದ್ದಾರೆ.

ತಮನ್ನಾ ಮಾದಕವಾಗಿ ಸೊಂಟ ಬಳುಕಿಸಿ, ಮೈಮಾಟ ಪ್ರದರ್ಶಿಸಿದ ‘ಕಾವಲಯ್ಯ’ ಹಾಡಿಗೆ ಸೆನ್ಸಾರ್ ಮಂಡಳಿಯಿಂದ ಹೇಗೆ ಅನುಮೋದನೆ ನೀಡಿತಯ ಎಂದು ಮನ್ಸೂರ್ ಅಲಿ ಖಾನ್ ಪ್ರಶ್ನಿಸಿದ್ದಾರೆ. ಹಾಡಿನ ಅರ್ಥವನ್ನು ತಮ್ಮ ನೃತ್ಯದ ಮೂಲಕ ಹಾಳು ಮಾಡಿದ್ದಾರೆ ಎಂದು ಖಾನ್ ಹೇಳಿದ್ದು, ಅವರ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ಕಾವಾಲಯ್ಯ ಹಾಡಿಗೆ ಅರುಣ್ ರಾಜಾ ಕಾಮರಾಜ್ ಸಾಹಿತ್ಯ ಬರೆದಿದ್ದು ಶಿಲ್ಪಾ ರಾವ್ ಹಾಗೂ ಅನಿರುದ್ಧ್ ಹಾಡಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಈ ಹಾಡು ಬಹಳ ಹಿಟ್ ಆಗಿತ್ತು. ಭಾರಿ ಕ್ರೇಜ್ ಹುಟ್ಟು ಹಾಕಿದ್ದ ಹಾಡಿನ ಬಗ್ಗೆ ಖಾನ್ ಟೀಕಿಸಿದ್ದಾರೆ. ತಮನ್ನಾ ಸ್ಟೆಪ್ಸ್ ಬಹಳ ಅಶ್ಲೀಲವಾಗಿದೆ. ಸೆನ್ಸಾರ್ ಮಂಡಳಿಯಿಂದ ಆ ಹಾಡಿಗೆ ಹೇಗೆ ಅನುಮೋದನೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...