ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಲು ಮಹಿಳೆಯರಿಗೆ ಅವಕಾಶ ಕೊಡಲಾಗುವುದು ಎಂದಿರುವ ತಾಲಿಬಾನ್, ಇದೇ ವೇಳೆ ಸಹ-ಶಿಕ್ಷಣಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಾಶ್ಚಾತ್ಯ ಪಡೆಗಳು ಬೆಂಬಲಿಸಿದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಗದ್ದುಗೆಗೆ ಏರಿದ ತಾಲಿಬಾನ್, 1990ರಲ್ಲಿ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿಸಿದ್ದ ಕಾಲಘಟ್ಟಕ್ಕಿಂತಲೂ ಭಿನ್ನವಾದ ಆಡಳಿತ ನೀಡುವುದಾಗಿ ತಿಳಿಸಿದೆ.
“ಅಫ್ಘಾನಿಸ್ತಾನದ ಜನರು ಶರಿಯಾ ಕಾನೂನಿನ ಅಡಿಯಲ್ಲಿ, ಸಹ ಶಿಕ್ಷಣದ ಹೊರತಾದ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರೆಸಲಿದ್ದಾರೆ. ಈ ನಿಟ್ಟಿನಲ್ಲಿ ಇನ್ನ ಇಸ್ಲಾಮಿಕ್ ರಾಷ್ಟ್ರೀಯ ಹಾಗೂ ಐತಿಹಾಸಿಕ ಮೌಲ್ಯಗಳ ಆಧಾರದ ಮೇಲೆ ಇಸ್ಲಾಮಿಕ್ ಪಠ್ಯಕ್ರಮವನ್ನು ಸೃಷ್ಟಿಸಲಿದ್ದೇವೆ” ಎಂದು ತಾಲಿಬಾನ್ ಆಡಳಿತದ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಅಟ್ಟಹಾಸ ಮೆರೆದ ತಾಲಿಬಾನ್ ಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ, ಜನಪ್ರಿಯ ಹಾಡುಗಾರ ಫವಾದ್ ಹತ್ಯೆ
ಪ್ರಾಥಮಿಕ ಶಾಲಾ ಹಂತದಿಂದಲೇ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳನ್ನು ಪ್ರತ್ಯೇಕವಾಗಿಟ್ಟು ಶಿಕ್ಷಣ ಒದಗಿಸಲಾಗುವುದು ಎಂದಿರುವ ತಾಲಿಬಾನ್, ಮಹಿಳಾ ಹಕ್ಕುಗಳನ್ನೂ ಸಹ ಇಸ್ಲಾಮಿಕ್ ಕಾನೂನಿನ ಅನ್ವಯದಲ್ಲೇ ಅರ್ಥೈಸಲಾಗುವುದು ಎನ್ನುತ್ತಿದೆ.